ಕುಂಬಳೆ: ಕುಂಬಳೆಯಲ್ಲಿ ಖಾಸಗಿ ಬಸ್‌ಗಳ ನಿಲುಗಡೆಗೆ ಸಂಬಂಧಿಸಿ ಹುಟ್ಟಿಕೊಂಡ ವಿವಾದ ಪರಿಹಾರ ವಾಗದೆ ಇನ್ನಷ್ಟು ಉಲ್ಭಣಾವಸ್ಥೆಗೆ ತಲುಪುತ್ತಿದೆ. ಸಮಸ್ಯೆ ಪರಿಹರಿಸಲು ಆರ್‌ಟಿಒ, ಪೊಲೀಸರ ನೇತೃತ್ವದಲ್ಲಿ ನಿನ್ನೆ ನಡೆದ ಚರ್ಚೆ ಯಾವುದೇ ನಿರ್ಧಾರ ಕೈಗೊಳ್ಳಲಾಗದೆ ಕೊನೆಗೊಂಡಿತು. ಕುಂಬಳೆ ಪಂಚಾಯತ್ ಕಚೇರಿಯಲ್ಲಿ ಎಎಸ್‌ಪಿ ಅಚ್ಯುತ್ ಅಶೋಕ್, ಕುಂಬಳೆ ಸಿಐ ಬೈಜು ಕೆ ಜೋಸ್, ಆರ್‌ಟಿಒ ನೇತೃತ್ವದಲ್ಲಿ ನಿನ್ನೆ ಸಂಜೆ ನಡೆದ ಸಭೆಯಲ್ಲಿ ಪಂಚಾಯತ್ ಆಡಳಿತ ಪಕ್ಷದ ಜನಪ್ರತಿನಿಧಿಗಳು, ಬ್ಲಾಕ್, ಜಿಲ್ಲಾ ಪಂಚಾಯತ್ ಸದಸ್ಯರು, ಬಸ್ ನೌಕರರು, ಬಸ್ ನೌಕರರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಬದಿಯಡ್ಕ, ಪೆರ್ಲ, ಪೇರಾಲ್‌ಕಣ್ಣೂರು ಭಾಗದಿಂದ ಬರುವ ಬಸ್‌ಗಳ ನೌಕರರು ತಮ್ಮ ಬಸ್‌ಗಳ ನಿಲುಗಡೆಗೆ ಸಂಬಂಧಿಸಿ ಎದುರಿಸು ತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಕುಂಬಳೆಯಲ್ಲಿ ಮೂಲಭೂತ ಸೌಕರ್ಯ ಏರ್ಪಡಿಸದೆ ದಿಢೀರ್ ಬಸ್ ನಿಲುಗಡೆ ಸ್ಥಳವನ್ನು ಬದಲಾಯಿ ಸುವಂತೆ ಪಂಚಾಯತ್ ತಿಳಿಸಿರುವುದೇ ಈಗಿನ ಸಮಸ್ಯೆಗೆ ಕಾರಣವೆಂದು ಬಸ್ ನೌಕರರು ಸಭೆಯಲ್ಲಿ ತಿಳಿಸಿದ್ದಾರೆ.ಕೆಲವು ವ್ಯಾಪಾರಿಗಳ ಹಿತಾಸಕ್ತಿಗಾಗಿ ಮಾತ್ರವೇ ಸೀತಾಂಗೋಳಿ ಭಾಗದಿಂದ ಬರುವ ಬಸ್‌ಗಳ ನಿಲುಗಡೆ ಸ್ಥಳವನ್ನು ಬದಲಾಯಿಸಲು ಪಂಚಾಯತ್ ಮುಂದಾಗಿದೆ.
ನಿಲುಗಡೆ ಸ್ಥಳ ಬದಲಾಯಿಸಲು ಪಂಚಾಯತ್, ಪೊಲೀಸ್ ಅಥವಾ ಆರ್‌ಟಿಒ ನಿಂದ ತಮಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ. ಕೆಲವು ವ್ಯಾಪಾರಿಗಳು ಸೀತಾಂಗೋಳಿಯಿಂದ ಬಸ್ ಹತ್ತಿ ಕುಂಬಳೆಗೆ ತಲುಪಿದಾಗ ಬಸ್‌ಗಳನ್ನು ಹಳೆ ಬಸ್ ನಿಲ್ದಾಣಕ್ಕೆ ಕೊಂಡೊಯ್ಯುವಂತೆ ಒತ್ತಾಯಿಸಿದ್ದಾರೆ. ಆದರೆ ಅದು ಸಮಸ್ಯೆಗೆ ಕಾರಣವಾಗಲಿದೆ ಯೆಂದು ತಿಳಿಸಿದರೂ ಪಂಚಾಯತ್ ಆಡಳಿತ ಸಮಿತಿ ಬಸ್ ನಿಲ್ದಾಣ ಬದಲಾಯಿ ಸಲು ಒತ್ತಾಯಿಸಿದೆ ಎಂದು ಬಸ್ ನೌಕರರು ಆರೋಪಿಸಿದ್ದಾರೆ.
ಬಸ್ ನೌಕರರ ಅಹವಾಲನ್ನು ಆಲಿಸಿದ ಆರ್‌ಟಿಒ, ಪೊಲೀಸ್ ಅಧಿಕಾರಿಗಳು ಮೂಲಭೂತ ಸೌಕರ್ಯ ಏರ್ಪಡಿಸಿದ ಬಳಿಕ ಮಾತ್ರವೇ ಬಸ್ ನಿಲುಗಡೆ ಸ್ಥಳವನ್ನು ಬದಲಾಯಿಸಿದರೆ ಸಾಕು ಎಂದು ಪಂಚಾಯತ್‌ಗೆ ನಿರ್ದೇಶಿಸಿದರು. ಈ ವೇಳೆ ನಾವು ಕೈಗೊಂಡ ನಿರ್ಧಾರವನ್ನು ಮಾತ್ರವೇ ಪೊಲೀಸ್ ಹಾಗೂ ಆರ್‌ಟಿಒ ಪಾಲಿಸಿದರೆ ಸಾಕು ಎಂಬುವುದಾಗಿ ಪಂಚಾಯತ್ ಜನಪ್ರತಿನಿಧಿಗಳು ತಿಳಿಸಿದ್ದು , ಅದನ್ನು ಒಪ್ಪಲು ಪೊಲೀಸ್, ಆರ್‌ಟಿಒ ಅಧಿಕಾರಿಗಳು ಸಿದ್ಧರಾಗಿಲ್ಲ. ಈ ಹಿನ್ನೆಲೆಯಲ್ಲಿ ಹಳೆ ಸ್ ನಿಲ್ದಾಣಕ್ಕೆ ಪ್ರವೇಶಿಸದ ಬಸ್‌ಗಳನ್ನು ತಡೆಯುವುದಾಗಿ ತಿಳಿಸಿ ಪಂಚಾಯತ್ ಜನಪ್ರತಿನಿಧಿಗಳು ಸಭೆಯಿಂದ ಮರಳಿ ದರು. ಇದೇ ವೇಳೆ ಬಸ್‌ಗಳನ್ನು ತಡೆದಲ್ಲಿ ಸಾರಿಗೆ ಅಡಚಣೆ ಉಂಟಾಗದ ರೀತಿಯಲ್ಲಿ ಬಸ್‌ಗಳನ್ನು ರಸ್ತೆ ಬದಿ ನಿಲ್ಲಿಸಿ ಪ್ರತಿಭಟಿಸುವುದಾಗಿ ಬಸ್ ನೌಕರರು ತಿಳಿಸಿದ್ದಾರೆ. ಒಟ್ಟಾರೆಯಾಗಿ ಕುಂಬಳೆ ಯಲ್ಲಿ ಪಂಚಾಯತ್ ಏರ್ಪಡಿಸಿದ ಬಸ್ ನಿಲುಗಡೆ ವ್ಯವಸ್ಥೆ ವಿವಾದ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.






