ಯುವತಿ ಮದುವೆಗೆ ಅಡ್ಡಿ ಯುವಕನ ವಿರುದ್ಧ ಕೇಸು

ಮುಳ್ಳೇರಿಯ: ಮದುವೆಗೆ ಅಡ್ಡಿಪಡಿಸುತ್ತಿರುವುದಾಗಿ ಆರೋ ಪಿಸಿ ಯುವತಿ ನೀಡಿದ ದೂರಿನಂತೆ ಆದೂರು ಪೊಲೀಸರು ಓರ್ವನ ವಿರುದ್ಧ ಕೇಸು ದಾಖಲಿಸಿಕೊಂ ಡಿದ್ದಾರೆ. ಮಿದ್‌ಲಾಜ್ ಎಂಬಾತನ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಿದ್‌ಲಾಜ್ ತನ್ನನ್ನು ಹಿಂಬಾಲಿಸಿ ಉಪಟಳ ನೀಡುತ್ತಿರು ವುದಾಗಿಯೂ ಯುವತಿ ಆರೋಪಿ ಸಿದ್ದಾಳೆ. ಉಪಟಳ ತೀವ್ರಗೊಂಡ ಹಿನ್ನೆಲೆಯಲ್ಲಿ  ಯುವತಿ ಪೊಲೀ ಸರಿಗೆ ದೂರು ನೀಡಿದ್ದಾಳೆ ಮಿದ್‌ಲಾಜ್‌ನನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾ ಚರಣೆ ತೀವ್ರಗೊಳಿಸಿದ್ದಾರೆ.

You cannot copy contents of this page