ಮಂಜೇಶ್ವರ: ಪಾಲಕ್ಕಾಡ್‌ನಿಂದ ಮಂಜೇಶ್ವರ ಉದ್ಯಾವರಕ್ಕೆ ಜಾನುವಾರುಗಳನ್ನು ತಂದ ಲಾರಿಯಲ್ಲಿದ್ದ ಮೂರು ಮಂದಿಗೆ ತಂಡವೊಂದು ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದ.
ಕಾಸರಗೋಡು ನಿವಾಸಿ ಅಬ್ಬಾಸ್, ಉತ್ತರಪ್ರದೇಶ ನಿವಾಸಿಗಳೂ ಪಾಲಕ್ಕಾಡ್‌ನಲ್ಲಿ ವಾಸಿಸುವ ಫುರ್ಖಾನ್ (47), ದಾವೂದ್ (28) ಎಂಬವರಿಗೆ ಹಲ್ಲೆಗೈಯ್ಯಲಾಗಿದೆ. ಈ ಪೈಕಿ ಫುರ್ಖಾನ್ ಹಾಗೂ ದಾವೂದ್‌ನನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ 1.30ರ ವೇಳೆ ಘಟನೆ ನಡೆದಿದೆ. ಈ ಮೂರು ಮಂದಿ ಪಾಲಕ್ಕಾಡ್‌ನಿಂದ ಜಾನುವಾರು ಗಳನ್ನು ಉದ್ಯಾವರಕ್ಕೆ ತಲುಪಿಸಿ ಅವುಗಳನ್ನು ಉದ್ಯಾವರ ಅಂಡರ್ ಪಾಸ್ ಬಳಿ ಇಳಿಸುತ್ತಿದ್ದಂತೆ ಆಟೋ ರಿಕ್ಷಾ ಹಾಗೂ ಬೈಕ್‌ಗಳಲ್ಲಿ ಬಂದ ತಂಡ ಹಲ್ಲೆಗೈದಿರುವುದಾಗಿ ಗಾಯಾಳುಗಳು ಆರೋಪಿಸಿದ್ದಾರೆ. ಘಟನೆ ಬಗ್ಗೆ ಅರಿತು ಮಂಜೇಶ್ವರ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿದ್ದು ಅಷ್ಟ್ಟರಲ್ಲಿ ತಂಡ ಪರಾರಿಯಾಗಿತ್ತು. ಬಳಿಕ ಪೊಲೀಸರು ನಡೆಸಿದ ಪರಿಶೀಲನೆ ವೇಳೆ ಅನಿಲ ಕುಮಾರ್ ಎಂಬಾತನ ಮೊಬೈಲ್ ಫೋನ್ ಅಲ್ಲಿ ಪತ್ತೆಯಾಗಿದೆ. ಆದ್ದರಿಂದ ಈತನ ನೇತೃತ್ವದಲ್ಲಿ ತಂಡ ತಲುಪಿರಬಹು ದೆಂದು ಅಂದಾಜಿಸಿರುವು ದಾಗಿ ಪೊಲೀಸರು ತಿಳಿಸಿದ್ದಾರೆ.



