ಕುಂಟಿಕಾನ ಮಾಡತ್ತಡ್ಕ ಶ್ರೀ ಹರಿಹರ ಭಜನಾಮಂದಿರದಲ್ಲಿ ಕರಸೇವಕರಿಗೆ ಗೌರವಾರ್ಪಣೆ
ಬದಿಯಡ್ಕ: ಕುಂಟಿಕಾನ ಮಾಡತ್ತಡ್ಕ ಶ್ರೀ ಹರಿಹರ ಭಜನಾ ಮಂದಿರ ಸಮಿತಿ, ಶ್ರೀ ಭಾರತಾಂಬಾ ಸೇವಾ ಟ್ರಸ್ಟ್ ಹಾಗೂ ಹರಿಹರ ಬಾಲಗೋಕುಲ ಸಮಿತಿ ಮಾಡತ್ತಡ್ಕ ಇದರ ಜಂಟಿ ಆಶ್ರಯದಲ್ಲಿ ಶ್ರೀ ಮಂದಿರದಲ್ಲಿ ಕರಸೇವಕರಿಗೆ ಹಾಗೂ ಶ್ರೀ ರಾಮಮಂದಿರ ಹೋರಾಟಗಾರರಿಗೆ ನಡೆದ ಗೌರವಾರ್ಪಣೆ ಸಮಾರಂಭದಲ್ಲಿ ಹಿರಿಯ ವಕೀಲರಾದ ಶ್ರೀಕೃಷ್ಣ ಭಟ್ ಮಾತನಾಡಿದರು. ಹಿರಿಯ ಕರಸೇವಕ ಗೋವಿಂದ ಭಟ್ ಮಿಂಚಿನಡ್ಕ, ಕರಸೇವಕ ಪಾಕತಜ್ಞ ಗಣೇಶ್ ಭಟ್ ಸರಳಿ, ಗಣಪತಿ ಪ್ರಸಾದ ಕುಳಮರ್ವ ಮಾತನಾಡಿದರು. ಶ್ರೀ ಮಂದಿರದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಣಬೈಲು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೋಪಾಲಮಣಿಯಾಣಿ ಕುಂಟಿಕಾನ, ರಾಮನಾಯ್ಕ ಕುಂಟಿಕಾನ, ಚಂದ್ರಶೇಖರ, ರಾಘವ, ಶಿವರಾಮ, ನಿಟ್ಟೆ ಉಪಸ್ಥಿತರಿದ್ದರು. ಮಾಡತ್ತಡ್ಕ ದೈವಗಳ ಸೇವಾಸಮಿತಿಯ ಅಧ್ಯಕ್ಷ ರಮೇಶ್ ಕೇರ ಸ್ವಾಗತಿಸಿ, ಕಿಶೋರ್ ದೇವರಬೆಟ್ಟು ನಿರೂಪಿಸಿದರು. ಬಾಲಗೋಕುಲದ ಅಧ್ಯಾಪಿಕೆ ಪ್ರೇಮಲತಾ ಕೇರ ವಂದಿಸಿದರು. ನಂತರ ರಾಮಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.