ಮವ್ವಾರಿನಲ್ಲಿ 6 ಮಂದಿಗೆ ಕಚ್ಚಿ ಗಾಯಗೊಳಿಸಿದ ಬೀದಿ ನಾಯಿಯ ರಂಪಾಟ ಕೊನೆಗೊಳಿಸಲು ಸ್ಥಳೀಯರ ಆಗ್ರಹ

ಮವ್ವಾರು: ಕಪ್ಪು ನಾಯಿಯೊಂದು ಮವ್ವಾರು ಪರಿಸರದಲ್ಲಿ ಸ್ಥಳೀಯರಿಗೆ ಭೀತಿ ಸೃಷ್ಟಿಸಿ ಅಲೆದಾಡುತ್ತಿರುವುದಾಗಿ ದೂರಲಾಗಿದೆ. ಈ ಪರಿಸರದ ಆರು ಮಂದಿಗೆ ಈ ನಾಯಿ ಕಚ್ಚಿ ಗಾಯ ಗೊಳಿಸಿದ್ದು, ಇವರು ಇಂಜಕ್ಷನ್ ಪಡೆಯಬೇಕಾದ ಸ್ಥಿತಿ ನಿರ್ಮಾ ಣವಾಗಿದೆ. ಮವ್ವಾರು ವಿಶ್ವಕರ್ಮ ಭಜನಾ ಮಂದಿರ ಪರಿಸರದಲ್ಲಿ ಹಾಗೂ ಪೇಟೆಯಲ್ಲಿ ತಿರುಗಾಡು ತ್ತಿರುವ ಈ ನಾಯಿಗೆ ಕೆಲವರು ಆಹಾರ ನೀಡುತ್ತಿರುವುದಾಗಿಯೂ ದೂರಲಾಗಿದೆ. ಇದರಿಂದಾಗಿ ಈ ಪರಿಸರವನ್ನು ಬಿಟ್ಟು ಕದಲದೆ ಇಲ್ಲಿನ ಜನರಿಗೆ ಭೀತಿಯೊಡ್ಡಿ ಅಲೆದಾಡುತ್ತಿದೆ. ಅಂಗನವಾಡಿ ಪರಿಸರದಲ್ಲೂ ನಾಯಿ ಅಲೆದಾಡುತ್ತಿದ್ದು, ಇಲ್ಲಿಗೆ ಬರುವ ಮಕ್ಕಳಿಗೆ ಇದು ಸಮಸ್ಯೆಯಾಗುತ್ತಿದೆ. ಜೊತೆಗೆ ಬಸ್ ನಿಲ್ದಾಣದಲ್ಲಿ ಬಸ್ ಕಾಯುವವರಿಗೆ ಕೂಡಾ ನಾಯಿ ಉಪ ಟಳ ನೀಡುತ್ತಿರುವುದಾಗಿ ಹೇಳಲಾಗು ತ್ತಿದೆ. ಅತ್ತಿತ್ತ ಸಂಚರಿಸುವವರನ್ನು ಬೆನ್ನತ್ತಿ ಆರು ಮಂದಿಗೆ ನಾಯಿ ಕಚ್ಚಿ ಗಾಯಗೊಳಿಸಿರುವ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ. ಈ ನಾಯಿಯ ಉಪಟಳವನ್ನು ಕೊನೆಗೊಳಿಸಲು ಅಧಿಕಾರಿಗಳು ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page