ನಾಳೆಯ ಮುಷ್ಕರವನ್ನು ಯಶಸ್ವಿಗೊಳಿಸಲು ಎನ್ಟಿಯು ಕರೆ
ಕಾಸರಗೋಡು: ವಿವಿಧ ಬೇಡಿಕೆ ಈಡೇರಿಕೆಗಾಗಿ ಎನ್ಟಿಯು ಜಿಲ್ಲಾ ಸಮಿತಿ ನಾಳೆ ನಡೆಸಲು ಉದ್ದೇಶಿಸಿರುವ ಮುಷ್ಕರದಲ್ಲಿ ಶಿಕ್ಷಕ ಸಮುದಾಯ, ನೌಕರರು ಭಾಗವಹಿಸಿ ಯಶಸ್ವಿಗೊಳಿಸಲು ಶಿಕ್ಷಕರ ಸಂಘಟನೆಗಳ ಒಕ್ಕೂಟ (ಎಫ್ ಇಟಿಒ) ಆಗ್ರಹಿಸಿದೆ. ಶಿಕ್ಷಕರ ಸವಲತ್ತುಗಳನ್ನು ಕಸಿದುಕೊಂಡಿರುವ ಎಡ ಸರಕಾರದ ವಿರುದ್ಧ ನಡೆಸುವ ಪ್ರತಿಭಟನೆಯನ್ನು ಹತ್ತಿಕ್ಕಲು ಸರಕಾರದ ಡಯಾಸ್ ನೋನ್ನಿಂದ ಸಾಧ್ಯವಾಗದೆಂದು ಸಂಘಟನೆ ತಿಳಿಸಿದೆ. ನಾಳೆ ಬೆಳಿಗ್ಗೆ ೧೦ ಗಂಟೆಗೆ ಕಾಸರಗೋಡು ಸಿವಿಲ್ ಸ್ಟೇಶನ್ ಆವರಣದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಎಲ್ಲಾ ಶಿಕ್ಷಕರು ಭಾಗವಹಿಸಬೇಕೆಂದು ಎನ್ಟಿಯು ವಿನಂತಿಸಿದೆ.
ಈ ಬಗ್ಗೆ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಟಿ. ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಭಾಕರ ನಾಯರ್, ವೆಂಕಪ್ಪ ಶೆಟ್ಟಿ, ಮಹಾಬಲ ಭಟ್ ಮಾತನಾಡಿದರು.