ಮಧೂರು: ಲೂಡೊ ಆಟದ ಮಧ್ಯೆ ಅದರ ಕಾಯಿನ್ ನುಂಗಿದ ಉಳಿಯತ್ತಡ್ಕ ನಿವಾಸಿಯಾದ ೮ ವರ್ಷದ ಬಾಲಕಿ ಉಸಿರುಗಟ್ಟಿ ಮೃತಪಟ್ಟಳು. ಉಳಿಯತ್ತಡ್ಕ ರಾಜೇಶ್ ಗಟ್ಟಿ- ರಾಜೇಶ್ವರಿ ದಂಪತಿ ಪುತ್ರಿಯಾದ ತನುಷ್ಕ (8) ಮೃತಪಟ್ಟ ಬಾಲಕಿ. ಕೊಲ್ಯದಲ್ಲಿ ಅಧ್ಯಾಪಿಕೆಯಾಗಿರುವ ತಾಯಿಯ ಜೊತೆ ಪುತ್ರಿ ಸಹಿತದ ಕುಟುಂಬ ವಾಸವಾಗಿದೆ. ಶನಿವಾರ ಮಧ್ಯೆ ಸಹೋದರನ ಜೊತೆ ಮನೆಯಲ್ಲಿ ಆಟವಾಡುತ್ತಿದ್ದ ಮಧ್ಯೆ ಅಜಾಗ್ರತೆಯಿಂದ ಲೂಡೊ ಕಾಯಿನ್ ಬಾಲಕಿ ನುಂಗಿದ್ದಾಳೆ. ಉಳ್ಳಾಲದಲ್ಲಿನ ಶಾಲೆಯೊಂದರಲ್ಲಿ ಅಧ್ಯಾಪಿಕೆಯಾಗಿದ್ದಾರೆ ಬಾಲಕಿಯ ತಾಯಿ. ಇಲ್ಲಿಗೆ ಸಮೀಪದ ಬಾಡಿಕೆ ಮನೆಯಲ್ಲಿ ಇವರು ವಾಸಿಸುತ್ತಿದ್ದಾರೆ. ಲೂಡೊ ಕಾಯಿನ್ ನುಂಗಿದ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದು ಬಳಿಕ ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಶ್ವಾಸಕೋಶದಿಂದ ಪ್ಲಾಸ್ಟಿಕ್ ಲೂಡೊ ಕಾಯಿನ್ ಪತ್ತೆಹಚ್ಚಲಾಗಿದೆ. ತೊಕ್ಕೋಟು ಸೈಂಟ್ ಸೆಬಾಸ್ಟಿಯನ್ ಶಾಲೆಯ ೨ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ ತನುಷ್ಕ.







