ಯುವಕ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಯುವಕನೋರ್ವ ಮನೆಯೊಳಗೆ ನೇಣುಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಪಿಲಾಂಕಟ್ಟೆ ಉಬ್ರಂಗಳದ ದಿ| ರಘುರಾಮ ಎಂಬವರ ಪುತ್ರ ಚಂದ್ರಶೇಖರ (30) ಮೃತಪಟ್ಟ ಯುವಕ. ಬದಿಯಡ್ಕದಲ್ಲಿ ವೆಲ್ಡಿಂಗ್ ಕೆಲಸ ನಡೆಸುವ ಸಹೋದರ ಚಂದ್ರಕಾಂತ ಹಾಗೂ ಚಂದ್ರಶೇಖರ ಮಾತ್ರವೇ ಮನೆಯಲ್ಲಿ ವಾಸಿಸುತ್ತಿದ್ದರು. ಚಂದ್ರಕಾಂತ ಕೆಲಸ ಮುಗಿಸಿ ನಿನ್ನೆ ರಾತ್ರಿ 7.30ರ ವೇಳೆ ಮನೆಗೆ ತಲುಪಿದಾಗ  ಚಂದ್ರಶೇಖರ  ಅಡುಗೆ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ.  ಕೂಡಲೇ ಅವರನ್ನು     ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಚಂದ್ರಶೇಖರ ಟೈಲ್ಸ್ ಕೆಲಸ ನಡೆಸುತ್ತಿ ದ್ದರು. ನಿನ್ನೆ ಮಧೂರಿನಲ್ಲಿ ನಡೆದ  ಮದುವೆ ಕಾರ್ಯಕ್ರಮದಲ್ಲಿ ಭಾಗವ ಹಿಸಿ ಮನೆಗೆ ಮರಳಿದ್ದರೆನ್ನಲಾಗಿದೆ.  ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.  ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವಿವಾಹಿತನಾದ ಚಂದ್ರಶೇಖರ ಸಾವಿಗೆ ಶರಣಾಗಲು ಕಾರಣವೇನೆಂದು ತಿಳಿದುಬಂದಿಲ್ಲ.

ಮೃತರು ತಾಯಿ ರಾಧಾ, ಸಹೋದರ-ಸಹೋದರಿಯರಾದ ರಾಧಿಕ, ಚಂದ್ರಿಕ, ರೇಣುಕ, ಚಂದ್ರಪ್ರಭಾ, ಚಂದ್ರಕಾಂತ, ಚಂದ್ರಹಾಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page