ಮುಳ್ಳೇರಿಯ: ಕಾರಡ್ಕ ಪಂಚಾಯತ್ ಹಿಂದೂ ಏಕತಾ ಸಮ್ಮೇಳನದ ಪ್ರಚಾರಾರ್ಥ ಸಮ್ಮೇಳನ ನಗರದಲ್ಲಿ ಸ್ಥಾಪಿಸಲಿರುವ ಧ್ವಜಸ್ತಂಭವನ್ನು ಸಾಗಿಸುವ ಘೋಷಯಾತ್ರೆ ಹಲವಾರು ದ್ವಿಚಕ್ರ ವಾಹನಗಳ ಹಾಗೂ ಇತರ ವಾಹನಗಳ ಬೆಂಗಾವಲಿನೊಂದಿಗೆ ನಡೆಯಿತು. ಕುಂಟಾರಿನಿಂದ ಆರಂಭ ಗೊಂಡ ಘೋಷಯಾತ್ರೆ ಪಂಚಾಯ ತ್‌ನ ವಿವಿಧ ಭಾಗಗಳಿಂದ ಸಂಚರಿಸಿ ಮುಳ್ಳೇರಿಯದ ಸಮ್ಮೇಳನ ನಗರಕ್ಕೆ ತಲುಪಿತು. ಘೋಷಯಾತ್ರೆಯನ್ನು ಕುಂಟಾರಿನಲ್ಲಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು ಸ್ವಾಗತ ಸಮಿತಿ ಅಧ್ಯಕ್ಷ ಎಂ.ಕೆ. ರಾಘವನ್‌ರಿಗೆ ಧ್ವಜ ಹಸ್ತಾಂತರಿಸಿ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಜನನಿ, ಉಪಾಧ್ಯಕ್ಷ ದಾಮೋದರ ರಾವ್ , ಇತರ ಜನಪ್ರತಿನಿಧಿಗಳು, ಸ್ವಾಗತ ಸಂಘದ ಕಾರ್ಯದರ್ಶಿ ರಾಮಚಂದ್ರನ್, ಕೋಶಾಧಿಕಾರಿ ರಾಜೇಶ್ ಸಿ.ಎಚ್, ಸ್ವಪ್ನ ಶ್ರೀಧರನ್, ಗೀತಾ ದಾಮೋದರನ್, ಶ್ವೇತಾ ಪ್ರಕಾಶ್ ಸಹಿತ ಹಲವರು ಭಾಗವಹಿಸಿದರು.







