ನಿವೃತ್ತ ಮುಖ್ಯೋಪಾಧ್ಯಾಯ ಐ. ಸದಾಶಿವ ಆಳ್ವ ನಿಧನ

ಉಪ್ಪಳ: ಮೂಲತ: ಉಪ್ಪಳ ರೈಲ್ವೇ ನಿಲ್ದಾಣ ರಸ್ತೆ ನಿವಾಸಿಯೂ ಇದೀಗ ಬೆಂಗಳೂರಿನಲ್ಲಿ ವಾಸವಾಗಿರುವ ನಿವೃತ್ತ ಮುಖ್ಯೋಪಾಧ್ಯಾಯ ಐ. ಸದಾಶಿವ ಆಳ್ವ ಇಚ್ಲಂ ಗೋಡು (95) ಬೆಂಗಳೂರಿ ನಲ್ಲಿರುವ ಪುತ್ರಿಯ ಮನೆಯಲ್ಲಿ ನಿಧನ ಹೊಂದಿದರು. ಇವರು ಉಪ್ಪಳ ಸರಕಾರಿ ಶಾಲೆಯಲ್ಲಿ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ್ದರು. ಅಲ್ಲದೆ ಮಂಜೇಶ್ವರ-ಉಪ್ಪಳ ಲಯನ್ಸ್ ಕ್ಲಬ್‌ನಲ್ಲಿ ಹಲವು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ ರಾಜೀವಿ .ಎಸ್ ಆಳ್ವ, ಮಕ್ಕಳಾದ ಸುಧಿ ರಂಜನ್ , ಗೀತಾ ಅಶೋಕ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಮಂಜೇಶ್ವರ-ಉಪ್ಪಳ ಲಯನ್ಸ್ ಕ್ಲಬ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸಂತಾಪ ಸೂಚಿಸಿದ್ದಾರೆ.

You cannot copy contents of this page