ಪೊವ್ವಲ್ ಕ್ವಾರ್ಟರ್ಸ್‌ನಿಂದ ಕಳವು: ಚೆರ್ಕಳ ಬಾಲಡ್ಕ ನಿವಾಸಿ ಸೆರೆ

ಬೋವಿಕ್ಕಾನ: ಪೊವ್ವಲ್‌ನ ಪಿ.ಎ. ಕಾಂಪ್ಲೆಕ್ಸ್ ಕ್ವಾರ್ಟರ್ಸ್‌ನ ಬೀಗ ಮುರಿದು ಲ್ಯಾಪ್‌ಟಾಪ್, ಸಂಬಂಧಪಟ್ಟ ಉಪಕರಣಗಳನ್ನು ಕಳವುಗೈದ ಪ್ರಕರಣದಲ್ಲಿ ಆರೋಪಿ ಸೆರೆಯಾಗಿದ್ದಾನೆ. ಚೆರ್ಕಳ ಬಾಲಡ್ಕ ನಿವಾಸಿ ಹನೀಫ್ (52)ನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಕಳೆದ ತಿಂಗಳ 25ರಂದು ಬೆಳಿಗ್ಗೆ 11ರಿಂದ ರಾತ್ರಿ 11ರ ಮಧ್ಯೆ ಕಳವು ನಡೆಸಲಾಗಿತ್ತು. ಉತ್ತರ ಪ್ರದೇಶ ನಿವಾಸಿ ಹಾಗೂ ಹೋಟೆಲ್ ನೌಕರ ರಿಹಾನ್ ಅಶ್ರಫ್‌ನ ಕೊಠಡಿಯಲ್ಲಿ ಕಳವು ನಡೆಸಲಾಗಿತ್ತು. ಬೀಗ ಮುರಿದು ಒಳನುಗ್ಗಿದ ಕಳ್ಳ ಮಲಗುವ ಕೊಠಡಿಯಲ್ಲಿ ಬ್ಯಾಗ್‌ನಲ್ಲಿರಿಸಿದ್ದ ಲ್ಯಾಪ್‌ಟಾಪ್, ಚಾರ್ಜರ್, ಮೈಕ್ರೋಫೋನ್ ಎಂಬಿವು ಕಳವುಗೈದಿರುವುದಾಗಿ ದೂರಲಾಗಿದೆ. ಕೆಲಸಕ್ಕೆ ತೆರಳಿದ್ದ ರಿಹಾನ್ ರಾತ್ರಿ ಹಿಂತಿರುಗಿದಾಗ ಕಳವು ನಡೆದ ಬಗ್ಗೆ ತಿಳಿದು ಬಂದಿದೆ. ಕೂಡಲೇ ಆದೂರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸಮೀಪದ ಸಿಸಿ ಟಿವಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿ ಒಂದು ವಾರದೊಳಗೆ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

RELATED NEWS

You cannot copy contents of this page