ಕಾಸರಗೋಡು: 2026-27 ನೇ ವಿತ್ತೀಯ ವರ್ಷದ ಜಿಲ್ಲಾ ಪಂಚಾಯತ್ ಬಜೆಟ್‌ನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕೆ.ಕೆ. ಸೋಯಾ ನಿನ್ನೆ ಪಂಚಾಯತ್‌ನ ಬಜೆಟ್ ಅಧಿವೇಶನದಲ್ಲಿ ಮಂಡಿಸಿದರು.
ಒಟ್ಟು 126.67 ಕೋಟಿ ರೂ. ಆದಾಯ ಹಾಗೂ 100.66 ಕೋಟಿ ರೂ.ಗಳ ವೆಚ್ಚ ಕಳೆದು ಒಟ್ಟು 26 ಕೋಟಿ ರೂ.ಗಳ ಮಿಗತೆ ನಿರೀಕ್ಷಿಸುವ ಬಜೆಟ್ ಇದಾಗಿದೆ.
ಬಜೆಟ್‌ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಲಾಗಿದೆ. ಜಿಲ್ಲಾ ಸರಕಾರಿ ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆಯನ್ನಾಗಿ ಭಡ್ತಿಗೊಳಿಸುವ ಹಾಗೂ ರೋಗಿಗಳಿಗೆ ಉಚಿತವಾಗಿ ಬೆಳಗ್ಗಿನ ಫಲಾಹಾರ ನೀಡುವ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡಲಾಗಿದೆ.
ಕುತ್ತಿಕ್ಕೋಲ್‌ನ ಸನ್‌ಡೇ ಥಿಯೇಟರ್‌ನಲ್ಲಿ ಸಾಂಸ್ಕೃತಿಕ ಉತ್ಸವ ನಡೆಸಲಾಗುವುದು. ಜಲಭದ್ರತೆಯನ್ನು ಖಾತರಿಪಡಿಸಲು 1೦೦ ಜಲ ಸಂಪನ್ಮೂಲಗಳನ್ನು ಕೈಗೆತ್ತಿಕೊಂಡು ಅಭಿವೃದ್ಧಿಪಡಿಸಲಾಗುವುದು. ಕೃಷಿ ಅಭಿವೃದ್ಧಿಗಾಗಿ ಹಲವು ಕ್ರಿಯಾ ಯೋಜನೆಗಳನ್ನು ಘೋಷಿಸಲಾಗಿದೆ. ಯುವಕ-ಯುವತಿಯರಿಗೆ ಐಎಎಸ್ ಡೆವಲಪ್‌ಮೆಂಟ್ ಆಂಡ್ ಎಂಪವರ್‌ಮೆಂಟ್ ಅಕಾಡೆಮಿ (ಐಡಿಇಎ) ಆರಂಭಿಸುವುದು ಸೇರಿದಂತೆ 1೦೦ ಕೋಟಿ ರೂ.ಗಳ ಶಿಕ್ಷಣ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಲಾಗಿದೆ. ಜಿಲ್ಲೆಯ 128 ಅಂಗನವಾಡಿಗಳಿಗೆ ಮುಂದಿನ 2 ವರ್ಷದೊಳಗಾಗಿ ಸ್ವಂತ ಕಟ್ಟಡ ನಿರ್ಮಿಸಲು ೮೦ ಕೋಟಿ ರೂ., ಶಾಲೆಗಳಲ್ಲಿ ಮಕ್ಕಳ ಉದ್ಯಾನ, ನಿರ್ಮಾಣ,ಸಂಪೂರ್ಣ ನಿವೇಶನ ಯೋಜನೆಗಾಗಿ ೬.೮೪ಕೋಟಿ ರೂ., ಹಲಸಿನಹಣ್ಣು ಮತ್ತು ಮಾವಿನಹಣ್ಣುಗಳಿಂದ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ, ಗ್ರಂಥಾಲಯಗಳ ಡಿಜಿಟಲೀಕರಣ, ರಸ್ತೆಗಳ ಅಭಿವೃದ್ಧಿ, ಭತ್ತಕೃಷಿ ಅಭಿವೃದ್ಧಿ, ಮಣ್ಣು ಮತ್ತು ಜಲಸಂರಕ್ಷಣೆಗಾಗಿ ೩.೮೮ ಕೋಟಿ ರೂ.ಗಳ ಯೋಜನೆ,ಕಾಸರಗೋಡು ಬೀಜೋತ್ಪಾದನಾ ಕೇಂದ್ರದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಅಗ್ರಿ ಕಾಂಪ್ಲೆಕ್ಸ್ ನಿರ್ಮಾಣ, ಪುಲ್ಲೂರು ಸೀಡ್ ಫಾಮ್ ಅಭಿವೃದ್ಧಿಗಾಗಿ 60 ಲಕ್ಷ ರೂ., ಅಲೋಪತಿ ವಲಯಗಳಲ್ಲಿ 6.26 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆ, ಪ್ರವಾಸೋದ್ಯಮ ಅಭಿವೃದ್ಧಿಗೆ 9೦ ಲಕ್ಷ ರೂ., ಆಯುರ್ವೇದ ಮತ್ತು ಹೋಮಿಯೋ ಆಸ್ಪತ್ರೆಗಳ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ 5೦ ಲಕ್ಷ ರೂ., ಕುಟುಂಬಶ್ರೀ ವಿಭಾಗದವರ ಕಲ್ಯಾಣಕ್ಕಾಗಿ 3.29 ಕೋಟಿ ರೂ., ಪರಿಶಿಷ್ಟ ವರ್ಗದವರ ಕಲ್ಯಾಣಕ್ಕಾಗಿ 9.19 ಕೋಟಿ ರೂ.ಮೀಸಲಿರಿಸಲಾಗು ವುದೆಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ಇದರ ಹೊರತಾಗಿ ತ್ಯಾಜ್ಯ ಸಮಸ್ಯೆ ಪರಿಹಾರಕ್ಕಾಗಿ 2.72 ಕೋಟಿ ರೂ., ಮಲ್ಟಿ ಪರ್ಪಸ್ ಮೈದಾನ ನಿರ್ಮಾಣ, ಹೊಸ ಮೈದಾನ ನಿರ್ಮಾಣ, ಓಪನ್ ಜಿಮ್ ಮತ್ತು ಶಿ ಜಿಮ್ ನಿರ್ಮಿಸಲು 2 ಕೋಟಿ ರೂ., ವಯೋಜನ ಕಲ್ಯಾಣಕ್ಕಾಗಿ 72 ಲಕ್ಷ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ. ಹೈನುಗಾರಿಕಾ ವಲಯಕ್ಕೆ 1.4 ಕೋಟಿ ರೂ, ಬೇಡಡ್ಕದಲ್ಲಿ ತೆಂಗಿನ ಸಸಿ ಉತ್ಪಾದನೆಗೆ 5 ಲಕ್ಷರೂ., ಬೀಜ ಉತ್ಪಾದನೆ ಮತ್ತು ವಿತರಣೆಗಾಗಿ 28 ಲಕ್ಷ ರೂ., ಗೊಬ್ಬರಗಳ ಗುಣಮಟ್ಟವನ್ನು ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆಸಲು 2,60,೦೦೦ ರೂ. ಆಶಾ ಕಾರ್ಯಕರ್ತೆಯರಿಗೆ ಮೆಡಿಕಲ್ ಕಿಟ್ ವಿತರಣೆಗಾಗಿ 20 ಲಕ್ಷ ರೂ., ಅಡುಗೆ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಹಾಗೂ ಸುರಕ್ಷತಾ ಉಪಕರಣಗಳ ಖರೀದಿಗೆ 5 ಲಕ್ಷ ರೂ., ಪಶು ಸಂಗೋಪನಾ ವಲಯಗಳ ಎಬಿಸಿ ಯೋಜನೆಗೆ 3೦ ಲಕ್ಷ ರೂ.ವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದ.







