ಎಸ್‌ಎಸ್‌ಎಲ್‌ಸಿ, ಪ್ಲಸ್‌ವನ್ ಪರೀಕ್ಷೆ ನಾಳೆಯಿಂದ

ಕಾಸರಗೋಡು: ಎಸ್‌ಎಸ್‌ಎಲ್‌ಸಿ ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆಗಳು ನಾಳೆಯಿಂದ ಆರಂಭಗೊಳ್ಳಲಿದೆ. ಇದರಂತೆ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕಾಸರಗೋಡು ಶಿಕ್ಷಣ ಜಿಲ್ಲೆಯಲ್ಲಿ 11497 ಮತ್ತು ಹೊಸದುರ್ಗ ಶಿಕ್ಷಣ ಜಿಲ್ಲೆಯಲ್ಲಿ 9197 ವಿದ್ಯಾರ್ಥಿಗಳು ಪರೀಕ್ಷೆಗೆ           ಬರೆಯಲಿದ್ದಾರೆ.  ಕಾಸರಗೋಡು ಶಿಕ್ಷಣ ಜಿಲ್ಲೆಯಲ್ಲಿ ಪರೀಕ್ಷೆ  ಬರೆಯುವವರಲ್ಲಿ 22 ಮಂದಿ  ಖಾಸಗಿಯಾಗಿ ಹೆಸರು ನೋಂದಾಯಿಸಿದವರು, 11475 ರೆಗ್ಯುಲರ್ ತರಗತಿಯ ವಿದ್ಯಾರ್ಥಿಗಳು ಒಳಗೊಂಡಿದ್ದಾರೆ. ಇದರಲ್ಲಿ 5988 ಗಂಡು ಮತ್ತು 5487 ಹೆಣ್ಮಕ್ಕಳು ಒಳಗೊಂಡಿದ್ದಾರೆ. 46 ಸರಕಾರಿ, 19 ಅನುದಾನಿತ ಶಾಲೆಗಳಲ್ಲಾಗಿ ಪರೀಕ್ಷೆ ನಡೆಯಲಿದೆ. ಅತೀ ಹೆಚ್ಚು ಎಂಬಂತೆ ನಾಯಮ್ಮಾಮೂಲೆ ಟಿಐಎಚ್‌ಎಸ್‌ಎಸ್‌ನಲ್ಲಿ 785 ಹಾಗೂ ಅತೀ ಕಡಿಮೆ ಮೂಡಂಬೈಲು ಸರಕಾರಿ ಹೈಸ್ಕೂಲ್‌ನಲ್ಲಿ 17 ಮಂದಿ ಪರೀಕ್ಷೆಗೆ ಬರೆಯಲಿದ್ದಾರೆ. ಚೆರ್ಕಳ ಮಾರ್ಥೋಮ ಕಿವುಡರ ಶಾಲೆಯಲ್ಲಿ 14 ಮಂದಿ ಪರೀಕ್ಷೆಗೆ ಹಾಜರಾಗಲಿದ್ದಾರೆ.  

 ಹೊಸದುರ್ಗ ಶಿಕ್ಷಣ ಜಿಲ್ಲೆಯಲ್ಲಿ 79 ಪರೀಕ್ಷಾ ಕೇಂದ್ರಗಳಲ್ಲಾಗಿ 4484 ಹುಡುಗಿಯರು ಸೇರಿ ಒಟ್ಟು 9197 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪ್ಲಸ್‌ವನ್ ಪರೀಕ್ಷೆ ನಾಳೆ ಮಧ್ಯಾಹ್ನ ಆರಂಭಗೊಳ್ಳಲಿದೆ. ಒಟ್ಟು 101 ಕೇಂದ್ರಗಳಲ್ಲಾಗಿ ಈ ಪರೀಕ್ಷೆ ನಡೆಯಲಿದೆ. ಇದರಂತೆ ಪ್ಲಸ್‌ವನ್‌ನಲ್ಲಿ 16952 ರೆಗ್ಯುಲರ್ ವಿದ್ಯಾರ್ಥಿಗಳು ಹಾಗೂ ಓಪನ್ ವಿಭಾಗದಲ್ಲಿ 1382 ಸೇರಿದಂತೆ ಒಟ್ಟು 18334 ವಿದ್ಯಾರ್ಥಿಗಳು ಪರೀಕ್ಷೆ  ಬರೆಯಲಿದ್ದಾರೆ. ಪ್ಲಸ್‌ಟು ಪರೀಕ್ಷೆ ಮಾರ್ಚ್ 6ರಂದು ಆರಂಭಗೊಳ್ಳಲಿದ್ದು ಇದರಲ್ಲಿ ರೆಗ್ಯುಲರ್ ವಿಭಾಗದಲ್ಲಿ 17945 ಮತ್ತು ಓಪವ್ ವಿಭಾಗದಲ್ಲಿ 1784 ಮಂದಿ ಸೇರಿದಂತೆ ಒಟ್ಟು 19693 ವಿದ್ಯಾರ್ಥಿಗಲು ಪರೀಕ್ಷೆ ಬರೆಯಲಿದ್ದಾರೆ. ಇದರ ಜತೆಗೆ ಪ್ಲಸ್ ವನ್ ಇಂಪ್ರೂವ್‌ಮೆಂಟ್ ಪರೀಕ್ಷೆಗಾಗಿ 13372 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಒಟ್ಟು 18 ದಿನಗಳಲ್ಲಾಗಿ ನಡೆಯುವ ಪರೀಕ್ಷೆ ಮಾರ್ಚ್ 28ರಂದು ಕೊನೆಗೊಳ್ಳಲಿದೆ.

You cannot copy contents of this page