ನಾರಾಯಣಮಂಗಲದಲ್ಲಿ ಶ್ರೀಮದ್ ಭಗವದ್ಗೀತಾ ಜ್ಞಾನ ಸದಸ್

ಕುಂಬಳೆ: ರವಿ ಶಂಕರ್ ಗುರು ನೇತೃತ್ವ ನೀಡುವ ಆರ್ಟ್ ಲಿವಿಂಗ್‌ನ ಜಿಲ್ಲಾ ನೇತೃತ್ವದ ಆಶ್ರಯದಲ್ಲಿ ಈ ತಿಂಗಳ 12ರಿಂದ 15ರ ತನಕ ನಾರಾಯಣಮಂಗಲದಲ್ಲಿ ಶ್ರೀಮದ್ ಭಗವದ್ಗೀತಾ ಜ್ಞಾನ ಸದಸ್ ನಡೆಯಲಿದೆ. ನಾರಾಯಣಮಂಗಲ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಸಭಾಂಗಣದಲ್ಲಿ ನಡೆಯುವ ತರಬೇತಿಯಲ್ಲಿ ಆರ್ಟ್ ಆಪ್ ಲಿವಿಂಗ್‌ನ ಅಂತಾರಾಷ್ಟ್ರೀಯ ತರಬೇತುದಾರ ಸಜಿ ನಿಸಾನ್, ವಿನೀತ್ ವಯನಾಡ್, ಸಬಿತಾ ಕೊಡಂಗಲ್ಲೂರು ಭಾಗವಹಿಸುವರೆಂದು ಸಂಯೋಜಕರು ತಿಳಿಸಿದ್ದಾರೆ. ‘ಭಗವದ್ಗೀತಾದ ಮೂಲಕ ಜೀವನ ವಿಜಯ’ ತರಬೇತಿಗೆ ಇವರು ನೇತೃತ್ವ ನೀಡುವರು. ಪ್ರತಿ ದಿನ ಸಂಜೆ ೫ರಿಂದ ರಾತ್ರಿ ೮ ಗಂಟೆ ವರೆಗೆ ತರಬೇತಿ ನೀಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ಸುಗೊಳಿಸಬೇಕೆಂದು ಸಂಘಟಕರಾದ ರಘುನಾಥ ಪೈ, ಡಾ. ಶಾಂಭವಿ, ಸುನಿಲ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

RELATED NEWS

You cannot copy contents of this page