ಮುಜುಂಗಾವಿನಲ್ಲಿ 8 ಎಕ್ರೆಯಷ್ಟು ಪಾರೆಯ ಹುಲ್ಲಿಗೆ ಬೆಂಕಿ ತಗಲಿ ಆತಂಕ: ಅಗ್ನಿಶಾಮಕದಳ, ಸ್ಥಳೀಯರಿಂದ ನಿಯಂತ್ರಣ

ಕುಂಬಳೆ: ಮುಜುಂಗಾವುನಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕ ಆತಂಕಕ್ಕೆ ಕಾರಣವಾಗಿದೆ. ಮಾಹಿತಿ ತಿಳಿದು ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ಹಾಗೂ ಸ್ಥಳೀಯರು ಸೇರಿ ಬೆಂಕಿ ನಿಯಂತ್ರಿಸಿದರು. ಮುಜುಂಗಾವಿನ ಎಂಟು ಎಕ್ರೆಯಷ್ಟು ಇರುವ ಪಾರೆಯಲ್ಲಿದ್ದ ಹುಲ್ಲಿಗೆ ಬೆಂಕಿ ತಗಲಿದೆ. ಇದೇ ವೇಳೆ ಬೀಸಿದ ಗಾಳಿಯಿಂದಾಗಿ ಬೆಂಕಿ ಆ ಪರಿಸರವನ್ನೆಲ್ಲಾ ಆವರಿಸಿದೆ. ಈ ಪರಿಸರದಲ್ಲಿರುವ ಕಟ್ಟಡದ ಜನರು ಹಾಗೂ ಸ್ಥಳೀಯರು ಭೀತಿಗೊಂಡಿದ್ದು, ನೀರು ಸಿಂಪಡಿಸಿ ಬೆಂಕಿ ಹರಡುವುದನ್ನು ನಿಯಂತ್ರಿಸಿದರು. ಬೆಂಕಿ ಸೃಷ್ಟಿಗೆ ಕಾರಣವೇನೆಂದು ತಿಳಿದು ಬಂದಿಲ್ಲ.

RELATED NEWS

You cannot copy contents of this page