ಕುಂಬ್ಡಾಜೆ: ಮುನಿಯೂರು ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಇಂದು ಜೀವ ಕಲಶಪೂಜೆ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 5.30ರಿಂದ ಮಾರ್ಪನಡ್ಕ ಜಯನಗರ ಶ್ರೀ ಗೋಪಾಲಕೃಷ್ಣ ಭಜನಾಮಂದಿರದಿಂದ ಹೊರೆಕಾಣಿಕೆ ಮೆರವಣಿಗೆ, ರಾತ್ರಿ ವಿದ್ವಾನ್ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಇವರ ಶಿಷ್ಯವೃಂದದವರಿಂದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ. ನಾಳೆ ಬೆಳಿಗ್ಗೆ 108 ತೆಂಗಿನಕಾಯಿ ಗಣಪತಿ ಹೋಮ, ಪ್ರತಿಷ್ಠಾಪಾಣಿ ಶ್ರೀ ದೇವರ ಪ್ರತಿಷ್ಠೆ, ಅಂಕುರ ಪೂಜೆ ಮೊದಲಾದ ವೈದಿಕ ಕಾರ್ಯಕ್ರಮಗಳು, ಸಂಜೆ 7ರಿಂದ ಪ್ರೊಫೆಸರ್ ಎ.ಎಲ್. ಅನಂತಪದ್ಮನಾಭ, ವಿದ್ವಾನ್ ಕಾರ್ಲೆ ಗಣರಾಜ್ ಇವರಿಂದ ದ್ವಂದ್ವ ವಯಲಿನ್ ವಾದನ, ರಾಧಾಮಾಧವಂ ಮುನಿಯೂರು ತಂಡದಿಂದ ಕೈಕೊಟ್ಟಿ ಕಳಿ ನಡೆಯಲಿದೆ.






