ಅಕ್ಕಸಾಲಿಗ ನಿಧನ

ಕಾಸರಗೋಡು: ಅಕ್ಕಸಾಲಿಗರಾಗಿದ್ದ ಮೂಲತಃ ಬೋವಿಕ್ಕಾನ ನಿವಾಸಿ ಚಂದ್ರಶೇಖರ ಆಚಾರ್ಯ (71) ನಿಧನ ಹೊಂದಿದರು. ಇವರು ಈಗ ಹಳೆ ಸೂರ್ಲು ಬಳಿ ವಾಸವಾಗಿದ್ದರು. ಮೃತರು ಪತ್ನಿ ಚಂಚಲಾಕ್ಷಿ, ಮಕ್ಕಳಾದ ಶೀತಲ್ ಕುಮಾರ್, ಮಿಥುಲ್ ಕುಮಾರ್, ಸೊಸೆ ಸರಿತ, ಸಹೋದರರಾದ ವಾಮನ ಆಚಾರ್ಯ ಬೋವಿಕ್ಕಾನ, ಉಮೇಶ್ ಆಚಾರ್ಯ, ಸಹೋದರಿ ಜಲಜಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವೆ ಸಹೋದರಿ ಲಲಿತ ಈ ಹಿಂದೆ ನಿಧನ ಹೊಂದಿದ್ದಾರೆ.

ನಿಧನಕ್ಕೆ ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾಸಂಘ, ಶ್ರೀ ವಿಶ್ವಕರ್ಮ ಯುವಕ ಸಂಘ, ಶ್ರೀ ವಿಶ್ವಕರ್ಮ ಮಹಿಳಾ ಸಂಘ ಕಾಸರಗೋಡು, ಶ್ರೀ ಕಾಳಿಕಾಂಬಾ ಮಠ ಮಧೂರು ಸಂತಾಪ ಸೂಚಿಸಿದೆ.

You cannot copy contents of this page