ನಿದ್ರಿಸುತ್ತಿದ್ದ 16ರ ಬಾಲಕಿಗೆ ದೌರ್ಜನ್ಯ 25ರ ಹರೆಯದ ಯುವತಿ ವಿರುದ್ಧ ಪೋಕ್ಸೋ ಕೇಸು ದಾಖಲು

ಕಾಸರಗೋಡು: ಮನೆಯಲ್ಲಿ ನಿದ್ರಿಸುತ್ತಿದ್ದ 16ರ ಹರೆಯದ ಬಾಲಕಿಯನ್ನು ದೌರ್ಜನ್ಯಗೈದುದಾಗಿ ನೀಡಿದ ದೂರಿನಂತೆ 25ರ ಹರೆಯದ ಯುವತಿ ವಿರುದ್ಧ  ಮೇಲ್ಪರಂಬ ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿಯ ದೂರಿನಂತೆ ತಳಿಪರಂಬ  ಪುಳಿಪರಂಬ ಸ್ನೇಹಮೆರ್ಲಿ (25) ಎಂಬಾಕೆ  ವಿರುದ್ಧ ಕೇಸು ದಾಖಲಿಸಲಾಗಿದೆ. ಈಕೆಯ ವಿರುದ್ಧ ತಳಿಪರಂಬ ಪೊಲೀಸ್ ಠಾಣೆಯಲ್ಲೂ 3 ಪೋಕ್ಸೋ ಪ್ರಕರಣಗಳು ದಾಖಲಾಗಿವೆಯೆಂದು ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ಎರಡು ಕೇಸುಗಳು ಸಹೋದರರಾದ ಬಾಲಕ  ಹಾಗೂ ಬಾಲಕಿಯನ್ನು ದೌರ್ಜನ್ಯಗೈದ ಪ್ರಕರಣಗಳಾಗಿವೆ. ಮೂರನೇ ಕೇಸು ಇನ್ನೋರ್ವ  ಬಾಲಕನನ್ನು ದೌರ್ಜನ್ಯಗೈದ ವಿರುದ್ಧವಾಗಿದೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿಯ ತಾಯಿಯ ಸ್ನೇಹಿತೆಯಾಗಿದ್ದಾಳೆ ಸ್ನೇಹ ಮೆರ್ಲಿ. ಒಂದು ತಿಂಗಳ ಹಿಂದೆ ಈಕೆ ಮನೆಗೆ ತಲುಪಿದಾಗ ಬಾಲಕಿಗೆ ದೌರ್ಜನ್ಯಗೈದು ದಾಗಿ ಆರೋಪವಿದೆ. ಆದರೆ ಹೆದರಿಕೆಯಿಂದ ಬಾಲಕಿ ಯಾರಲ್ಲೂ ಹೇಳಿರಲಿಲ್ಲವೆಂದು ಹೇಳಲಾಗುತ್ತಿದೆ. ಕೌನ್ಸಿಲಿಂಗ್ ನಡೆಸಿದಾಗ ಈ ಬಗ್ಗೆ ತಿಳಿದುಬಂದಿದೆ.

You cannot copy contents of this page