ಉಪ್ಪಳ: ಕುಂಬಳೆ ಶ್ರೀ ಗೋಪಾಲಕೃಷ್ಣ ಕ್ಷೇತ್ರ ರಸ್ತೆಯಲ್ಲಿ ಸುಮಾರು 45 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಗೀತಾ ಜ್ಯುವೆಲ್ಲರಿ ಮಾಲಕ ಕುಂಬಳೆ ಹೈಸ್ಕೂಲ್ ಬಳಿಯ ನಿವಾಸಿ ಕೆ.ಜನಾರ್ದನ ಆಚಾರ್ಯ (86) ನಿಧನ ಹೊಂದಿದರು. ನಿನ್ನೆ ಸಂಜೆ ಮನೆಯಿಂದ ಕುಂಬಳೆ ಪೇಟೆಗೆ ತಲುಪಿದ್ದ ಇವರಿಗೆ ಹೃದಯÁ ಘಾತ ಉಂಟಾಗಿದ್ದು, ಕೂಡಲೇ ಸ್ಥಳೀಯರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರಲ್ಲಿ ನಿಧನ ಸಂಭವಿಸಿದೆ. ಇವರು ಆರ್.ಎಸ್.ಎಸ್ ಹಿರಿಯ ಸ್ವಯಂ ಸೇವಕರಾಗಿದ್ದರು. ಬಂಗ್ರಮAಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ಕ್ಷೇತ್ರದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ವೇದಾವತಿ, ಮಕ್ಕಳಾದ ಮನೋಜ್ ಆಚಾರ್ಯ, ವಸಂತ ಆಚಾರ್ಯ, ಗೀತಾ, ಸೊಸೆಯಂದಿರಾದ ವಿಜಯಲಕ್ಷಿ÷್ಮ, ವಿದ್ಯಾಜ್ಯೋತಿ, ನಿರ್ಮಲ, ಅಳಿಯ ದುರ್ಗಾದಾಸ್ ಆಚಾರ್ಯ, ಸಹೋದರರಾದ ಲಕ್ಷ÷್ಮಣ ಆಚಾರ್ಯ, ಗೋಪಾಲಕೃಷ್ಣ ಆಚಾರ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಪುತ್ರ ಉದಯ ಆಚಾರ್ಯ ಈ ಹಿಂದೆ ನಿಧನಹೊಂದಿದ್ದಾರೆ. ನಿಧನಕ್ಕೆ ಬಂಗ್ರಮAಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ಕ್ಷೇತ್ರ ಆಡಳಿತ ಸಮಿತಿ, ಮಹಿಳಾ ಸಂಘ ಸಂತಾಪ ಸೂಚಿಸಿದೆ.





