ತಂದೆಯ ಅಪರಿಮಿತ ಮದ್ಯಪಾನ: ಪ್ಲಸ್‌ವನ್ ವಿದ್ಯಾರ್ಥಿನಿ ಕೈಯ ನರ ಕತ್ತರಿಸಿ ಆಸ್ಪತ್ರೆಯಲ್ಲಿ ದಾಖಲು

ಕಾಸರಗೋಡು: ತಂದೆಯ ಅಪರಿಮಿತ ಮದ್ಯಪಾನದಿಂದ ಮನನೊಂದು ಪ್ಲಸ್‌ವನ್ ವಿದ್ಯಾರ್ಥಿನಿ ಆತ್ಮಹತ್ಯೆಗೆತ್ನಿಸಿ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ನಡೆದಿದೆ.  ಮೇಲ್ಪರಂಬ ಪೊಲೀಸ್ ಠಾಣೆಯಲ್ಲಿ ವಾಸಿಸುವ ೧೬ರ ಹರೆಯದ ಬಾಲಕಿ ಕೈಯ ನರ ಕತ್ತರಿಸಿ ಅಸ್ವಸ್ಥಗೊಂಡಿದ್ದು, ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾಳೆ. ಬಾಲಕಿ ಅಪಾಯದಿಂದ ಪಾರಾಗಿದ್ದಾಳೆಂದು  ಆಸ್ಪತ್ರೆ ಮೂಲಗಳು ತಿಳಿಸಿವೆ. ಕಳೆದ ದಿನ ರಾತ್ರಿ ಈ ಘಟನೆ ನಡೆದಿದೆ.  ತಂದೆ  ಅಪರಿಮಿತವಾಗಿ ಮದ್ಯ ಸೇವಿಸುತ್ತಿರುವುದರಿಂದ ಕುಟುಂಬದಲ್ಲಿ ಉಂಟಾಗುವ ಸಮಸ್ಯೆಗಳನ್ನು ನೆನೆದು  ಬಾಲಕಿ ತೀವ್ರವಾಗಿ ನೊಂದುಕೊಂಡಿ ದ್ದಳೆನ್ನಲಾಗಿದೆ.  ಮದ್ಯ ಸೇವಿಸದಂತೆ ಹಲವು ಬಾರಿ ತಂದೆಯೊಂದಿಗೆ ವಿನಂತಿಸಿಕೊಂಡರೂ ಅದಕ್ಕೆ ತಂದೆ ಸಿದ್ಧವಾಗಲಿಲ್ಲವೆನ್ನಲಾಗಿದೆ.ಇದರಿಂದ  ಮನನೊಂದು ಬಾಲಕಿ ಕೈಯ ನರ ಕತ್ತರಿಸಿ ಆತ್ಮಹತ್ಯೆಗೆತ್ನಿಸಿದ್ದಾಳೆಂದು ಹೇಳಲಾಗುತ್ತಿದೆ.

RELATED NEWS

You cannot copy contents of this page