ಕೇರಳ ಸ್ಟೇಟ್ ಪೆನ್ಶನರ್ಸ್ ಸಂಘ್ ರಾಜ್ಯ ಸಮ್ಮೇಳನ ಆರಂಭ

ಕಾಸರಗೋಡು: ಪಿಂಚಣಿದಾರರ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಏಕ ಕಂತಿನಲ್ಲಿ ನೀಡಬೇಕು ಎಂದು ಬಿಎಂಎಸ್ ದಕ್ಷಿಣ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಎಂ.ಪಿ. ರಾಜೀವ್ ಆಗ್ರಹಿಸಿದರು. ಕೇರಳ ಸ್ಟೇಟ್ ಪೆನ್ಶನರ್ಸ್ ಸಂಘ್‌ನ 28ನೇ ರಾಜ್ಯ ಸಮ್ಮೇಳನಕ್ಕೆ ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೇರಳ ಸ್ಟೇಟ್ ಪೆನ್ಶನರ್ಸ್ ಸಂಘ್ ರಾಜ್ಯ ಅಧ್ಯಕ್ಷ ಬಿ. ಜಯಪ್ರಕಾಶ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಪಿ. ಜಯಭಾನು, ರಾಜ್ಯ ಕಾರ್ಯದರ್ಶಿ ಎ. ಪ್ರಕಾಶ್, ಮುಖಂಡರಾದ ಜಿ. ಗೋಪಕುಮಾರ್, ಕೆ. ಕೃಷ್ಣನ್, ಸಿ. ಸುರೇಶ್ ಕುಮಾರ್, ಕೆ.ಎನ್. ವಿನೋದ್, ಎಂ. ಈಶ್ವರ ರಾವ್, ಜಿಲ್ಲಾಧ್ಯಕ್ಷ ಬಿ. ನಾಗರಾಜ ಭಟ್ ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ಕೆ. ಮುತ್ತುಕೃಷ್ಣನ್ ಸ್ವಾಗತಿಸಿ, ರಾಜ್ಯ ಸಮಿತಿ ಸದಸ್ಯ ಪಿ. ದಿಲೀಪ್ ಕುಮಾರ್ ವಂದಿಸಿದರು.

RELATED NEWS

You cannot copy contents of this page