ಶ್ರೀ ಸತ್ಯಸಾಯಿ ಪ್ರೇಮಪ್ರವಾಹಿನಿ ರಥಯಾತ್ರೆಗೆ ತಾಳಿಪಡ್ಪುನಲ್ಲಿ ಸ್ವಾಗತ

ಕಾಸರಗೋಡು: ಭಗವಾನ್ ಶ್ರೀ ಸತ್ಯಸಾಯಿ ಬಾಬಾರ ಜನ್ಮಶತಾಬ್ದಿ ಆಚರಣೆಯಂಗವಾಗಿ ದೇಶವ್ಯಾಪಕವಾಗಿ ಸಂಚರಿಸುವ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆಗೆ ತಾಳಿಪಡ್ಪು ಸತ್ಯಸಾಯಿ ಅಭಯನಿಕೇತನದ ಆಶ್ರಯದಲ್ಲಿ ಸ್ವಾಗತ ನೀಡಲಾಯಿತು. ನಗರದ ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಪರಿಸರದಿಂದ ಆರಂಭಗೊಂಡ ಶೋಭಾಯಾತ್ರೆಗೆ ಉಜ್ವಲ ಸ್ವಾಗತವನ್ನು ನೀಡಲಾಗಿದ್ದು, ಬಳಿಕ ಪಾದುಕ ದರ್ಶನ, ಸತ್ಸಂಗ, ಧಾರ್ಮಿಕ ಸಭೆ ನಡೆಯಿತು.

ಶ್ರೀ ಸತ್ಯಸಾಯಿ ಸೇವಾ ಕರ್ನಾಟಕ ರಾಜ್ಯ ಕೋ-ಆರ್ಡಿ ನೇಟರ್ ಜಗನ್ನಾಥ್ ನಾಡಿಗೇರ ಪ್ರಧಾನ ಭಾಷಣ ಮಾಡಿದರು. ಸತ್ಯಸಾಯಿ ಜಿಲ್ಲಾಧ್ಯಕ್ಷ ಎಚ್. ಮಹಾಲಿಂಗ ಭಟ್, ತಾಳಿಪಡ್ಪು ಶ್ರೀ ಸತ್ಯಸಾಯಿ ಅಭಯನಿಕೇತನ ಅಧ್ಯಕ್ಷ ಡಾ| ಎಸ್.ಬಿ. ಖಂಡಿಗೆ, ಕಾರ್ಯದರ್ಶಿ ಪಿ. ಲತಾ, ಮನೋಹರ ನಾಯಕ್, ಪಿ. ವೃಂದ, ಕವಿತಾ ವಿ. ರಾವ್, ಸಿ.ಎನ್. ರಾಮಕೃಷ್ಣ, ಅಶೋಕ ಬೆಂಗಳೂರು ಭಾಗವಹಿಸಿದರು. ಅಭಯನಿಕೇತನದ ಜೊತೆ ಕಾರ್ಯದರ್ಶಿ ಬಿ. ಪ್ರೇಮ್ ಪ್ರಕಾಶ್ ಸ್ವಾಗತಿಸಿದರು. ಮಹಾ ಮಂಗಳಾರತಿ, ಭಜನೆ, ಓಂಕಾರ, ಸುಪ್ರಭಾತ, ನಗರ ಸಂಕೀರ್ತನೆ, ಪಾದುಕಾ ಪೂಜೆ ಜರಗಿತು.

You cannot copy contents of this page