ಹೊಸದುರ್ಗ: ರಾಣಿಪುರಕ್ಕಿರುವ ರಸ್ತೆಯಲ್ಲಿ ಕಾರುಗಳಲ್ಲಿ ಅಪಾಯಕರವಾದ ರೀತಿಯಲ್ಲಿ ಸಾಹಸಿಕ ಪ್ರಯಾಣ ನಡೆಸಿದ ಯುವಕರ ವಿರುದ್ಧ ಕೇಸು ದಾಖಲಿಸಲಾಗಿದೆ. ನಾಲ್ಕು ಮಂದಿ ಕರ್ನಾಟಕ ನಿವಾಸಿಗಳ ವಿರುದ್ಧ ರಾಜಪುರಂ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಬೆಳಿಗ್ಗೆ ಎರಡು ಕಾರುಗಳಲ್ಲಾಗಿ ತಲುಪಿದ ಯುವಕರು ರಾಣಿಪುರಂ ರಸ್ತೆಯಲ್ಲಿ ಸ್ಥಳೀಯರಲ್ಲಿ ಭೀತಿ ಮೂಡಿಸುವ ರೀತಿಯಲ್ಲಿ ಸಾಹಸಿಕ ಪ್ರಯಾಣ ನಡೆಸಿದ್ದಾರೆ. ಕಾರಿನ ಬಾಗಿಲುಗಳನ್ನು ತೆರೆದು ಅದರ ಮೇಲೆ ಕುಳಿತುಕೊಂಡು ಕಿಲೋ ಮೀಟರ್‌ಗಳಷ್ಟು ದೂರ ಪ್ರಯಾಣ ನಡೆಸಿದ್ದಾರೆನ್ನಲಾಗಿದೆ. ಇವರು ಪ್ರಯಾಣಿಸುವ ದೃಶ್ಯಗಳು ಇನ್ನೋರ್ವ ಪ್ರಯಾಣಿಕ ಮೊಬೈಲ್‌ನಲ್ಲಿ ಚಿತ್ರೀಕರಿಸಿ ರಾಜಪುರಂ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ದೃಶ್ಯಗಳು ಲಭಿಸಿದ ಕೂಡಲೇ ರಾಣಿಪುರಕ್ಕೆ ತಲುಪಿದ ಪೊಲೀಸರು ತಂಡವನ್ನು ಹಾಗೂ ಅವರ ವಾಹನಗಳನ್ನು ಪತ್ತೆಹಚ್ಚಿ ಕಾನೂನು ಉಲ್ಲಂಘನೆಗೆ ದಂಡ ವಸೂಲು ಮಾಡಿದ್ದಾರೆ. ಈ ಮೊದಲೂ ಕೂಡಾ ಈ ರೀತಿಯಲ್ಲಿ ಈ ರೂಟ್‌ನಲ್ಲಿ ನಡೆದ ಸಾಹಸಿಕ ಪ್ರಯಾಣದಿಂದ ಓರ್ವ ವಿದ್ಯಾರ್ಥಿಯ ಧಾರುಣ ಸಾವಿಗೆ ಕಾರಣವಾಗಿತ್ತು. ಮಳೆಗಾಲದ ಪ್ರಕೃತಿ ಸೌಂದರ್ಯವನ್ನು ನೋಡಲೆಂದು ರಾಣಿಪುರಂಗೆ ತಲುಪುವ ಸಂಚಾರಿಗಳ ಸಂಖ್ಯೆ ಹೆಚ್ಚುತ್ತಿದೆ.





