ಹೊಸಬೆಟ್ಟುವಿನ ಮನೆಯಿಂದ ಮೂರೂವರೆ ಪವನ್ ಚಿನ್ನ, 8 ಸಾವಿರ ರೂ. ಕಳವು

ಉಪ್ಪಳ: ಮಂಜೇಶ್ವರ ಹೊಸಬೆಟ್ಟುವಿನ ಮನೆಯೊಂದ ರಿಂದ ಮೂರೂವರೆ ಪವನ್ ಚಿನ್ನಾಭರಣ ಹಾಗೂ 8 ಸಾವಿರ ರೂಪಾಯಿ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಹೊಸಬೆಟ್ಟು ಗುಡ್ಡೆಕೇರಿ ಸೀನತ್ ಮಂಜಿಲ್‌ನ ಸೌದ (41) ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜುಲೈ 2ರಂದು ಬೆಳಿಗ್ಗೆ 11 ಗಂಟೆಯಿಂದ 6ರಂದು ಸಂಜೆ 5 ಗಂಟೆ ಮಧ್ಯೆ ಮನೆಯಿಂದ ನಗ-ನಗದು ಕಳವಿಗೀಡಾಗಿರುವುದಾಗಿ  ಸೌದ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.  ಮನೆಯೊಳಗೆ ಕಪಾಟಿನಲ್ಲಿರಿಸಿದ್ದ ಚಿನ್ನ ಹಾಗೂ ಹಣವನ್ನು ಕಳವು ನಡೆಸಲಾಗಿದೆ.  ಈ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ತನಿಖೆ ಯಂಗವಾಗಿ  ಬೆರಳಚ್ಚು ತಜ್ಞರು ಇಂದು ಮನೆಗೆ ತಲುಪಿ ಪರಿಶೀಲನೆ ನಡೆಸಲಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page