ತಲಪ್ಪಾಡಿ-ಚೆಂಗಳ ಷಟ್ಪಥ ರಾಷ್ಟ್ರೀಯ ಹೆದ್ದಾರಿ ಪ್ರಧಾನಮಂತ್ರಿಯಿಂದ ಇಂದು ಲೋಕಾರ್ಪಣೆ

ಕಾಸರಗೋಡು: ತಲಪ್ಪಾಡಿಯಿಂದ ಚೆಂಗಳ ತನಕದ ಷಟ್ಪಥ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಅಪರಾಹ್ನ ಲೋಕಾರ್ಪಣೆಗೈಯ್ಯುವರು. ಕೇರಳದಲ್ಲಿ ಲೋಕಾರ್ಪಣೆಗೈಯ್ಯುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಪ್ರಥಮ ರೀಚ್ ಎಂಬ ವಿಶೇಷತೆಯೂ ಇದು ಹೊಂದಿದೆ.

ತಲಪ್ಪಾಡಿಯಿಂದ ಚೆಂಗಳ ತನಕದ ರಾಷ್ಟ್ರೀಯ ಹೆದ್ದಾರಿ 66 ಒಟ್ಟು 39 ಕಿ.ಮೀ. ಹೊಂದಿದೆ. ಇದರಲ್ಲಿ ನಗರದ ಕರಂದಕ್ಕಾಡ್‌ನಿಂದ ಆರಂಭಗೊಂಡು ನುಳ್ಳಿಪ್ಪಾಡಿ ತನಕದ 29 ಸ್ಪ್ಯಾನ್‌ಗಳು ಹೊಂದಿರುವ 1.13 ಕಿ.ಮೀ ತನಕದ ಫ್ಲೈಓವರ್ ಕೂಡಾ ಒಳಗೊಂಡಿದೆ. ಏಕಕಂಬದಿಂದ ನಿರ್ಮಿಸಲಾದ ಫ್ಲೈಓವರ್ ಎಂಬ ವಿಶೇಷತೆಯೂ ಇದಕ್ಕಿದೆ. ಆಧುನಿಕ ಬೋಕ್ಸ್ ಗಾರ್ಡರ್ ತಂತ್ರಜ್ಞಾನ ಬಳಸಿ ದೇಶದಲ್ಲಿ ಏಕ ಕಂಬ ಆಧಾರದಲ್ಲಿ ಅತೀ ಹೆಚ್ಚು ಉದ್ದದಲ್ಲಿ ನಿರ್ಮಿಸಲಾಗಿರುವ ಷಟ್ಪಥದ ಫ್ಲೈ ಓವರ್ ಕೂಡಾ ಇದಾಗಿದೆ.

ಕೇರಳದಲ್ಲಿ ಒಟ್ಟು ೨೩ ರೀಚ್‌ಗಳಲ್ಲಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಷಟ್ಪಥವಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಇದರಂತೆ ತಲಪ್ಪಾಡಿಯಿಂದ ಚೆಂಗಳ ತನಕದ ರೀಚ್‌ನ ನಿರ್ಮಾಣಕ್ಕಾಗಿ ೧೭೦೩ ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.

You cannot copy contents of this page