ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ವ್ಯಾಪಾರಿ ಮೃತ್ಯು
ಉಪ್ಪಳ: ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಾಪಾರಿ ಮೃತಪಟ್ಟರು.ಐಲ ಮೈದಾನ ಬಳಿಯ ನಿವಾಸಿ ಧನಂಜಯ (೪೭) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಮನೆ ಪರಿಸರದಲ್ಲಿ ಬೇಕರಿ ವ್ಯಾಪಾರಿಯಾಗಿ ದ್ದರು. ಒಂದು ವಾರ ಹಿಂದೆ ಇವರು ವಿಷ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿರುವುದಾಗಿ ತಿಳಿಸಲಾಗಿದೆ. ಮೃತರು ಪತ್ನಿ ಸುನಿತ, ಮಕ್ಕಳಾದ ಅಂಜಲಿ, ನಿಖಿಲ್, ಸಹೋದರ-ಸಹೋದರಿಯರಾದ ರವಿಚಂದ್ರ, ಲಲಿತ, ನಳಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.