ಅಡುಗೆ ಅನಿಲ ಕ್ಷಾಮ: ಕುಂಬಳೆಯಲ್ಲಿ 10ರಷ್ಟು ಹೋಟೆಲ್‌ಗಳು ಮುಚ್ಚುಗಡೆ

ಕುಂಬಳೆ: ಅಡುಗೆ ಅನಿಲ ಕ್ಷಾಮ ತೀವ್ರಗೊಂಡಿದ್ದು, ಇದರಿಂದ  ಕುಂಬಳೆಯಲ್ಲಿ 10ರಷ್ಟು ಹೋಟೆಲ್ ಗಳನ್ನು ಮುಚ್ಚುಗಡೆಗೊಳಿಸಲಾಗಿದೆ.  ಕುಂಬಳೆ ಪೇಟೆಯಲ್ಲಿರುವ ಹೋಟೆಲ್ ತಾಜ್, ಗೋಕುಲ್ ರೆಸ್ಟೋರೆಂಟ್, ಮುಬಾರಕ್, ಮಿರ್ಚಿ ಮಸಾಲ,  ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆ ಬಳಿಯ ಕ್ಯಾಂಟೀನ್ ಸಹಿತ 10ರಷ್ಟು ಹೋಟೆಲ್‌ಗಳು ಇಂದು ತೆರೆಯಲಿಲ್ಲ. ಇತ್ತೀಚೆಗಿನಿಂದ ಅಡುಗೆ ಅನಿಲ ಸಿಲಿಂಡರ್ ವಿತರಣೆ ಮೊಟಕುಗೊಂಡಿ ರುವುದೇ ಇದಕ್ಕೆ ಕಾರಣವಾಗಿದೆ. ಅಡುಗೆ ಅನಿಲ ಲಭ್ಯವಾಗದಿದ್ದಲ್ಲಿ ಇನ್ನೂ ಹಲವು ಹೋಟೆಲ್‌ಗಳು ಮುಚ್ಚುಗಡೆಗೊಳ್ಳುವ ಸಾಧ್ಯತೆ ಯಿದೆಯೆಂದು ಹೇಳಲಾಗುತ್ತಿದೆ. ಇದೇ ವೇಳೆ ಹೋಟೆಲ್‌ಗಳು ಮುಚ್ಚು ಗಡೆಗೊಂಡಿರುವುದರಿಂದ ಪೇಟೆಗೆ ತಲುಪುವವರು ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

RELATED NEWS

You cannot copy contents of this page