ಕಳತ್ತೂರಿನ ಮನೆಯಿಂದ ನಗ-ನಗದು ಕಳವು : ರಿಮಾಂಡ್‌ನಲ್ಲಿದ್ದ ಇಬ್ಬರು ಆರೋಪಿಗಳನ್ನು ಕಸ್ಟಡಿಗೆ ತೆಗೆದು ಸಮಗ್ರ ತನಿಖೆ

ಕುಂಬಳೆ:  ಕಳತ್ತೂರು ಪಂಜಿಕಲ್ಲಿನ ಯೂಸಫ್ ಎಂಬವರ ಮನೆಯಿಂದ ೯ ಪವನ್ ಚಿನ್ನಾಭರಣ ಹಾಗೂ  ಒಂದು ಲಕ್ಷರೂ. ಕಳವುಗೈದ ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂ ಡ್‌ನಲ್ಲಿದ್ದ ಇಬ್ಬರು  ಆರೋಪಿಗಳನ್ನು ಕುಂಬಳೆ ಪೊಲೀಸರು ಒಂದು ದಿನಕ್ಕೆ ತಮ್ಮ ಕಸ್ಟಡಿಗೆ ತೆಗೆದುಕೊಂಡು ಸಮಗ್ರ ತನಿಖೆ ನಡೆಸುತ್ತಿದ್ದಾರೆ.  ಪಾಲಕ್ಕಾಡ್ ಚಿಟ್ಟೂರು ಆಯಿರೂರ್ ಕೊಳಕ್ಕೆಪರಂಬಿಲ್‌ನ ಜಲೀಲ್ ಯಾನೆ ಶಟರ್ ಜಲೀಲ್ (36), ಕಾಸರಗೋಡು ಆಲಂಪಾಡಿಯ  ಅಬ್ದುಲ್ ಲತೀಫ್ (46) ಎಂಬಿವರನ್ನು ಪೊಲೀಸರು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸುತ್ತಿದ್ದಾರೆ.

ಇತ್ತೀಚೆಗೆ  ಈ ಇಬ್ಬರು ಆರೋಪಿಗಳನ್ನು  ಬೇಕಲ ಡಿವೈಎಸ್ಪಿ ಎಂ.ಪಿ. ಆಜಾದ್‌ರ ನೇತೃತ್ವದಲ್ಲಿ ಸೆರೆಹಿಡಿಯಲಾಗಿತ್ತು. ಬಳಿಕ ಇವರನ್ನು ತನಿಖೆಗೊಳಪಡಿಸಿದಾಗ ಕಳತ್ತೂರು ಪಂಜಿಕಲ್‌ನ ಯೂಸಫ್‌ರ ಮನೆಯಿಂದ ನಗ-ನಗದು ಕಳವು ನಡೆಸಿರುವುದು ಇವರೇ ಆಗಿದ್ದಾರೆಂದು ತಿಳಿದುಬಂದಿದೆ. ಫೆ.೧೪ರಂದು ಸಂಜೆಯಿಂದ 15ರಂದು ಬೆಳಿಗ್ಗೆ 7 ಗಂಟೆ ಮಧ್ಯೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಎರಡಂತಸ್ತಿನ ಮನೆಯ ಮುಂಭಾಗದ ಬಾಗಿಲನ್ನು ಮುರಿದು ಒಳಗೆ ನುಗ್ಗಿದ ಕಳ್ಳರು ಕಪಾಟು ತೆರೆದು ಚಿನ್ನ ಹಾಗೂ ಹಣ ಕಳವು ನಡೆಸಿದ್ದಾರೆ.  ರಾಜ್ಯದ ವಿವಿಧ ಭಾಗಗಲ್ಲಾಗಿ ೭೨ರಷ್ಟು ಕಳವು ಪ್ರಕಣಗಳಲ್ಲಿ ಈ ಆರೋಪಿಗಳು ಶಾಮೀಲಾಗಿದ್ದಾರೆಂದು ತನಿಖೆಯಲ್ಲಿ ತಿಳಿದುಬಂದಿದೆ. ಕುಂಬಳೆ ಠಾಣೆ ವ್ಯಾಪ್ತಿಯಲ್ಲಿ ನಡೆದ ಇನ್ನೂ ಹಲವು ಕಳವು ಪ್ರಕರಣದಲ್ಲಿ ಇವರು ಶಾಮೀಲಾಗಿದ್ದಾರೆಯೇ ಎಂದು  ತಿಳಿಯುವ ಉದ್ದೇಶದಿಂದ  ಆರೋಪಿಗಳನ್ನು ಕಸ್ಟಡಿಗೆ ತೆಗೆಯಲಾಗಿದೆ. ತನಿಖೆಯ ಬಳಿಕ ಇಂದು ಸಂಜೆ ಇವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page