ಕಾಸರಗೋಡು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಎಂಬಂತೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 230113 ಮತದಾರರಿದ್ದಾರೆ. ಇದರಲ್ಲಿ 115801 ಪುರುಷರು ಮತ್ತು 114312 ಮಹಿಳೆಯರು ಒಳಗೊಂಡಿದ್ದಾರೆ.
ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ 105824 ಪುರುಷರು, 105399 ಮಹಿಳೆಯರು ಸೇರಿ ಒಟ್ಟು 210923 ಮತದಾರರಿದ್ದಾರೆ.
ಉದುಮ ಕ್ಷೇತ್ರದಲ್ಲಿ 112166 ಪುರುಷರು, 116342 ಮಹಿಳೆಯರು, ನಾಲ್ವರು ಮಂಗಳಮುಖಿ ಯರು ಸೇರಿ ಒಟ್ಟು 258512 ಮತದಾರರಿದ್ದಾರೆ.
ಹೊಸದುರ್ಗ ಕ್ಷೇತ್ರದಲ್ಲಿ ಒಟ್ಟು 223980 ಮತದಾರರಿದ್ದು, ಇದರಲ್ಲಿ 109008 ಪುರುಷರು, 114966 ಮಹಿಳೆಯರು ಮತ್ತು ಆರು ಮಂಗಳಮು ಖಿಯರು ಒಳಗೊಂಡಿದ್ದಾರೆ.
ತೃಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ 102044 ಪುರುಷರು, 108044 ಮಹಿಳೆಯರು ಮತ್ತು ಇಬ್ಬರು ಮಂಗಳಮುಖಿಯರು ಸೇರಿ ಒಟ್ಟು 210090 ಮತದಾರರಿದ್ದಾರೆ.






