ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ತೃಕರಿಪುರ, ಉಡುಮುಂದಲದಲ್ಲಿ 19ರ ಹರೆಯದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಕರಿಕ್ಕಡವ್ ನಿವಾಸಿ ಎಂ. ಸಮೀರರ ಪುತ್ರಿ ಜಾಸ್ಮೀನ (19) ನಾಪತ್ತೆಯಾಗಿದ್ದು ತಾಯಿ ನೀಡಿದ ದೂರಿನಂತೆ ಚಂದೇರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಅಪರಾಹ್ನ3.30ಕ್ಕೆ ಮನೆಯಿಂದ ಹೊರಹೋದ ಈಕೆ ಮರಳಿ ಬಂದಿಲ್ಲವೆಂದು, ಸಜೀರ್ ಎಂಬ ವ್ಯಕ್ತಿಯ ಜೊತೆ ಹೋಗಿರಬೇಕೆಂದು ಶಂಕಿಸುತ್ತಿರುವುದಾಗಿಯೂ ದೂರಿನಲ್ಲಿ ಹೇಳಲಾಗಿದೆ. ಯುವತಿಯನ್ನು ಪತ್ತೆ ಹಚ್ಚುವುದಕ್ಕಾಗಿ ಸೈಬರ್ ಸೆಲ್ನ ಸಹಾಯ ಪಡೆಯಲಾಗಿದೆ. ಸಜೀರ್ನ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.






