ನಗರದಲ್ಲಿ ಉತ್ಸಾಹ ಸೃಷ್ಟಿಸಿ ಸಂಸದ ಶಾಫಿ ಪರಂಬಿಲ್

ಕಾಸರಗೋಡು: ಐಕ್ಯರಂಗದ ಕಾಸರಗೋಡು ವಿಧಾನಸಭಾ ಮಂಡಲ ಸಮಿತಿ ಚುನಾವಣೆ ಪ್ರಚಾರಾರ್ಥ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಾಫಿ ಪರಂಬಿಲ್ ಭಾಗವಹಿಸಿದರು. ನಿನ್ನೆ ರಾತ್ರಿ 8 ಗಂಟೆಗೆ ನಿಗದಿಪಡಿಸಿದ್ದ ಉದ್ಘಾಟನಾ ಕಾರ್ಯಕ್ರಮ ಮಧ್ಯರಾತ್ರಿ 12 ಗಂಟೆಗೆ ಆರಂಭಗೊಂಡಿದೆ. ತೃಕರಿಪುರದಲ್ಲಿ ನಡೆಸಿದ ರೋಡ್‌ಶೋ ವಿಳಂಬಗೊಂಡಿರುವುದೇ ಕಾರ್ಯಕ್ರಮ ದಲ್ಲಿ ಶಾಫಿ ಪರಂಬಿಲ್ ಭಾಗವಹಿಸಲು ತಡವಾಗಿರುವುದು. ಆದರೆ ಆ ಸಮಯದಲ್ಲೂ ಕಾರ್ಯಕರ್ತರು ಉತ್ಸಾಹಭರಿತಲಾಗಿ ಭಾಗವಹಿಸಿದರು. ಐಕ್ಯರಂಗದ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಕೂಡಾ ಕಾರ್ಯಕರ್ತರ ಉತ್ಸಾಹದಲ್ಲಿ ಪಾಲ್ಗೊಂಡರು.

ಯುಡಿವೈಎಫ್ ಕಾಸರಗೋಡು ವಿಧಾನಸಭಾ ಮಂಡಲ ಅಧ್ಯಕ್ಷ ಸಿದ್ದಿಕ್ ಸಂತೋಷ್‌ನಗರ್ ಅಧ್ಯಕ್ಷತೆ ವಹಿಸಿದರು.

ಸಂಚಾಲಕ ಆಬಿದ್ ಎಡಚ್ಚೇರಿ ಸ್ವಾಗತಿಸಿ, ಕೋಶಾಧಿಕಾರಿ ಹಾರಿಸ್ ಬೆದಿರ ವಂದಿಸಿದರು. ಸಿ.ಟಿ. ಅಹಮ್ಮದಾಲಿ, ಶಾಸಕ ಎನ್.ಎ. ನೆಲ್ಲಿಕುನ್ನು ಸಹಿತ ಹಲವಾರು ಮುಖಂಡರು ಭಾಗವಹಿಸಿದರು.

You cannot copy contents of this page