ಮಂಜೇಶ್ವರ ಐಕ್ಯರಂಗದ ಅಭ್ಯರ್ಥಿಯ ದ್ವಿತೀಯ ಹಂತದ ಪ್ರಚಾರ

ಮಂಜೇಶ್ವರ: ಐಕ್ಯರಂಗದ ಅಭ್ಯರ್ಥಿ ಎಕೆಎಂ ಅಶ್ರಫ್‌ರ ಚುನಾವಣಾ ಪ್ರಚಾರ ದ್ವಿತೀಯ ಹಂತ ಪೂರ್ತಿಗೊಳಿಸಿದೆ. ಮಂಜೇಶ್ವರ ಪಂಚಾಯತ್ ಐಕ್ಯರಂಗ ಸಮಾವೇಶಗಳು ಪೂರ್ತಿಗೊಂಡಿತು. ಸಮಾವೇಶವನ್ನು ಕರ್ನಾಟಕ ಕ್ಯಾಶ್ಯೂ ಬೋರ್ಡ್ ಅಧ್ಯಕ್ಷೆ ಮಮತಾ ಗಟ್ಟಿ ಉದ್ಘಾಟಿಸಿದರು. ಐಕ್ಯರಂಗದ ಪಂಚಾಯತ್ ಸಮಿತಿ ಅಧ್ಯಕ್ಷ ಅಸೀಸ್ ಹಾಜಿ ಅಧ್ಯಕ್ಷತೆ ವಹಿಸಿದರು. ಸಂಚಾಲಕ ಹನೀಫ್ ಪಡಿಂಞ್ಞಾರ್ ಸ್ವಾಗತಿಸಿದರು. ಮಂಜುನಾಥ ಆಳ್ವ, ಅಸೀಸ್ ಮರಿಕ್ಕೆ, ಸೋಮಶೇಖರ ಜೆ.ಎಸ್, ಡಿಎಂಕೆ ಮೊಹಮ್ಮದ್, ಲಕ್ಷ್ಮಣ ಪ್ರಭು, ಟಿ.ಎ. ಮೂಸಾ, ಎಂ. ಅಬ್ಬಾಸ್, ಎ.ಕೆ. ಆರಿಫ್, ಸೈಫುಲ್ಲಾ ತಂಙಳ್, ಹರ್ಷಾದ್ ವರ್ಕಾಡಿ,  ಫ್ರಾನ್ಸಿಸ್ ಮೊಂತೇರೊ, ಓಂಕೃಷ್ಣ, ಕೃಷ್ಣ ಅಡ್ಕತ್ತೊಟ್ಟಿ, ನಾಗೇಶ್ ಮಾತನಾಡಿದರು.

You cannot copy contents of this page