ಮಂಜೇಶ್ವರ: ಎಡರಂಗದ ಮಂಜೇಶ್ವರ ಮಂಡಲ ಅಭ್ಯರ್ಥಿ ಕೆ.ಆರ್. ಜಯಾನಂದರ ಪರವಾಗಿ ನಿನ್ನೆ ಹೊಸಂಗಡಿಯಲ್ಲಿ ಚುನಾವಣಾ ಸಭೆ ಜರಗಿತು. ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಪ್ರಧಾನ ಭಾಷಣ ಮಾಡಿದರು. ಸಿಪಿಐ ಜಿಲ್ಲಾ ಕೌನ್ಸಿಲ್ ಸದಸ್ಯ ಜಯರಾಮ ಬಲ್ಲಂಗುಡೇಲು ಅಧ್ಯಕ್ಷತೆ ವಹಿಸಿದರು. ಸಿಪಿಎಂನ ಸಿಜಿ ಮ್ಯಾಥ್ಯು ಪ್ರಸ್ತಾಪಿಸಿದರು. ಅಭ್ಯರ್ಥಿ ಕೆ.ಆರ್. ಜಯಾನಂದ, ಜಿಲ್ಲಾ ಪಂ. ಮಾಜಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ. ಬಾಬು, ಜಿಲ್ಲಾ ಅಸಿಸ್ಟೆಂಟ್ ಸೆಕ್ರೆಟರಿ ಬಿ. ರಾಜನ್, ಸಿಪಿಎಂ ಕುಂಬಳೆ ಏರಿಯಾ ಕಾರ್ಯದರ್ಶಿ ಸಿ.ಎ. ಸುಬೈರ್, ಸಿಪಿಐಯ ರಾಮಕೃಷ್ಣ ಕಡಂಬಾರು, ತಾಜುದ್ದೀನ್, ಕಮಲಾಕ್ಷ ಭಾಗವಹಿಸಿದರು.






