ಮದ್ರಸ ವಿದ್ಯಾರ್ಥಿಯನ್ನು ದೌರ್ಜನ್ಯಗೈದ ಅಧ್ಯಾಪಕ, ಹಿರಿಯ ವಿದ್ಯಾರ್ಥಿ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: 14 ವರ್ಷದ ಬಾಲಕನಿಗೆ ಸಲಿಂಗರತಿ ದೌರ್ಜ ನ್ಯಗೈದ ಬಗ್ಗೆ ದೂರಲಾಗಿದೆ. ಈ ಬಗ್ಗೆ ಬಾಲಕ ಕಲಿಯುತ್ತಿರುವ  ಮದ್ರಸ ಅಧ್ಯಾಪಕನಾದ ಮುಹಮ್ಮದ್ ಎಂಬಾತನ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ. 2024ರಿಂದ 2026ರ ವರೆಗಿನ ಸಮಯದಲ್ಲಿ ಹಲವು ಬಾರಿ ದೌರ್ಜನ್ಯಗೈದಿರುವುದಾಗಿ ದೂರಲಾಗಿದೆ. ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮದ್ರಸ ಅಧ್ಯಾಪಕನ ದೌರ್ಜ ನ್ಯಕ್ಕೆ ತುತ್ತಾದ 14ರ ಹರೆಯದ ಬಾಲಕನ ದೂರಿನಂತೆ ಇನ್ನೊಂದು ಪೋಕ್ಸೋ ಕೇಸು ಬೇಕಲ ಪೊಲೀ ಸರು ನೋಂದಾಯಿಸಿದ್ದಾರೆ. 2024 ರಿಂದ ಹಲವು ಬಾರಿ ದೌರ್ಜನ್ಯ ಗೈದಿರುವುದಾಗಿ ನೀಡಿದ ದೂರಿನಲ್ಲಿ ಹಿರಿಯ ವಿದ್ಯಾರ್ಥಿಯಾದ 15ರ ಹರೆಯದ ಬಾಲಕನ ವಿರುದ್ಧ ಈ ಕೇಸು ದಾಖಲಿಸಲಾಗಿದೆ.

RELATED NEWS

You cannot copy contents of this page