ಕಾಸರಗೋಡು: ಕುಂಡಂಗುಳಿಯ ಹೋಟೆಲ್‌ನಿಂದ 65೦೦ ರೂ. ಕಳವುಗೈದ ಪ್ರಕರಣದ ಆರೋಪಿಯನ್ನು ಗಂಟೆಗಳೊಳಗೆ ಬಂಧಿಸಲಾಗಿದೆ. ಮರುದಡ್ಕ ನಿವಾಸಿ, ಕುಂಡಂಗುಳಿಯ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಟಿ.ಕೆ ಹುಸೈನ್ (40) ಎಂಬಾತನನ್ನು ಬೇಡಗಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಶನಿವಾರ ರಾತ್ರಿ ಕುಂಡಂಗುಳಿಯ ತನಿಮಾ ಹೋಟೆಲ್‌ನಿಂದ ಕಳವು ನಡೆದಿದೆ. ಹೋಟೆಲ್‌ನ ಹಿಂಭಾಗದ ಮೂಲಕ ಒಳಗೆ ನುಗ್ಗಿದ ಕಳ್ಳ ಮೇಜಿನಲ್ಲಿರಿಸಿದ್ದ 6500 ರೂಪಾಯಿ ಕಳವು ನಡೆಸಿದ್ದನೆನ್ನಲಾಗಿದೆ. ನಿನ್ನೆ ಬೆಳಿಗ್ಗೆ ಹೋಟೆಲ್ ತೆರೆಯಲು ತಲುಪಿದಾಗ ಕಳವು ವಿಷಯ ಹೋಟೆಲ್‌ನ ಪಾಲುದಾರ ಗಾಳಿಮುಖ ನಿವಾಸಿ ಮೊಹಮ್ಮದ್ ಹಾರಿಸ್‌ರ ಗಮನಕ್ಕೆ ಬಂದಿದೆ. ಅವರು ನೀಡಿದ ದೂರಿನಂತೆ ಬೇಡಗಂ ಪೊಲೀಸರು ಕೇಸು ದಾಖಲಿಸಿದ ತನಿಖೆಯಲ್ಲಿ ಕಳವು ನಡೆಸಿರುವುದು ಹೋಟೆಲ್‌ನ ಮಾಜಿ ನೌಕರನಾದ ಪಿ.ಕೆ. ಹುಸೈನ್ ಆಗಿದ್ದಾನೆಂದು ತಿಳಿದುಬಂದಿತ್ತು. ಕೂಡಲೇ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಗಿದೆ.







