ಬೇಡಗಂನಲ್ಲಿ ಬಾಲಕಿ ಗರ್ಭಿಣಿ: ವಿವಿಧ ಕಡೆಗಳ ದೌರ್ಜನ್ಯ ಪ್ರಕರಣಗಳಲ್ಲಿ 82ರ ವೃದ್ದ ಸೇರಿ 3 ಮಂದಿ ವಿರುದ್ಧ ಪೋಕ್ಸೋ ಕೇಸು; ತಂದೆ ಸೆರೆ

ಕಾಸರಗೋಡು: ವಿಭಿನ್ನ ಘಟನೆಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ನಿನ್ನೆ ಪೊಲೀಸರು ಮೂರು ಪೋಕ್ಸೋ ಪ್ರಕರಣಗಳನ್ನು ನೋಂದಾಯಿಸಿದ್ದಾರೆ. 10ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ ಯಾದ ಘಟನೆಯಲ್ಲಿ ಬೇಡಗಂ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. 15ರ ಹರೆಯದ ಬಾಲಕಿ ನೀಡಿದ ದೂರಿನಂತೆ ಕುತ್ತಿಕ್ಕೋಲ್ ಪಂಚಾಯತ್‌ನಲ್ಲಿ ವಾಸವಾಗಿರುವ ಸಂಬಂಧಿಕನಾದ ಯುವಕನ ವಿರುದ್ಧ ಕೇಸು ದಾಖಲಿಸ ಲಾಗಿದೆ. ಬಾಲಕಿ ಗರ್ಭಿಣಿ ಎಂದು ಸ್ಪಷ್ಟವಾಗಿರುವುದರೊಂದಿಗೆ ದೌರ್ಜನ್ಯ ಘಟನೆ ಬಹಿರಂಗ ಗೊಂಡಿದೆ. ಆರೋಪಿಯನ್ನು ಪತ್ತೆಹಚ್ಚಲು ಬೇಡಗಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.೮ನೇ ತರಗತಿಯ ಬಾಲಕಿಯನ್ನು ದೌರ್ಜನ್ಯಗೈದ ತಂದೆಯ ವಿರುದ್ಧ ಮೇಲ್ಪರಂಬ ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ. ತಿಂಗಳು ಗಳಿಂದ ನಡೆದ ದೌರ್ಜನ್ಯ ಘಟನೆ ಬಗ್ಗೆ ತಾಯಿಗೆ ತಿಳಿದಿತ್ತೆನ್ನಲಾಗಿದೆ. ಅಪರಾಧ ಗೊತ್ತಿದ್ದೂ ಅದನ್ನು ಮರೆಮಾಚಿದ ತಾಯಿಯ ಹೆಸರಲ್ಲೂ ಕೇಸು ದಾಖಲಿಸಲಾಗಿದೆ. ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.ಚಂದೇರದಲ್ಲಿ 6ರ ಹರೆಯದ ಬಾಲಕಿಯನ್ನು 82ರ ವೃದ್ದ ದೌರ್ಜನ್ಯ ಗೈದ ಪ್ರಕರಣದಲ್ಲಿ  ಚಂದೇರ ಪೊಲೀಸ್ ಪೋಕ್ಸೋ ಕೇಸು ದಾಖಲಿಸಿದ್ದಾರೆ. ಸಂಬಂಧಿಕನಾದ ಈತ ಬಾಲಕಿಗೆ ದೌರ್ಜನ್ಯಗೈದಿ ರುವುದಾಗಿ ದೂರಲಾಗಿದೆ.

RELATED NEWS

You cannot copy contents of this page