ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕ ತೈಲ ಕಂಪೆನಿಗಳು ವಾಣಿಜ್ಯ ಬಳಕೆಯ 19 ಕೆ.ಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಂದಿನಿಂದ 195/5- ರೂ.ನಂತೆ ಹೆಚ್ಚಳಮಾಡಿವೆ.ಇದರಿಂದಾಗಿ ಕೇರಳದಲ್ಲಿ 19 ಕೆ.ಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ಈಗ 2092 ರೂ.ಗೇರಿದೆ. ಇದಕ್ಕೂ ಮೊದಲು ಮಾರ್ಚ್ 1ರಂದು ಪ್ರತೀ ಸಿಲಿಂಡರ್ ಬೆಲೆಯಲ್ಲಿ ತಲಾ 114/5 ರೂ.ನಂತೆ ಹೆಚ್ಚಿಸಲಾಗಿತ್ತು. ಅದಾದ ಬೆನ್ನಲ್ಲೇ ಎಪ್ರಿಲ್ ತಿಂಗಳ ಮೊದಲ ದಿನದಿಂದಲೇ ಬೆಲೆಯಲ್ಲಿ ಮತ್ತೆ 195.50 ರೂ.ನಂತೆ ಹೆಚ್ಚಿಸಲಾಗಿದೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇಂಧನ ಪೂರೈಕೆಯಲ್ಲಿ ವ್ಯತ್ಯಯ ವುಂಟಾಗಿದ್ದು ಇದರಿಂದಾಗಿ ಜಾಗತಿಕ ತೈಲ ಬೆಲೆಯಲ್ಲಿ ಸುಮಾರು ಶೇ. 50ರಷ್ಟು ಹೆಚ್ಚಳವಾಗಿದೆ. ಇದು ಹೋಟೆಲ್ಗಳ ಮೇಲೆ ಅತೀ ಹೆಚ್ಚಿನ ಪರಿಣಾಮ ಬೀರತೊಡಗಿದೆ. ಎಲ್ಪಿಜಿ ಸಿಲಿಂಡರ್ಗಳ ಪೂರೈಕೆ ಸರಿಯಾಗಿ ನಡೆಯದೇ ಇರುವುದರಿಂದ ಕಾಸರಗೋಡು ಸೇರಿದಂತೆ ಕೇರಳದಲ್ಲಿ ಹಲವಾರು ಹೋಟೆಲ್ಗಳು ಮುಚ್ಚಿಕೊಂಡಿದೆ. ಕರ್ನಾಟಕ ಸಹಿತ ಇತರ ಹಲವು ರಾಜ್ಯಗಳಲ್ಲೂ ಹೋಟೆಲ್ಗಳು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ.ಇಂತಹ ಪರಿಸ್ಥಿತಿಯಲ್ಲಿ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆಯುಂಟಾಗಿರು ವುದು ಹೋಟೆಲ್ ಉದ್ಯಮವನ್ನು ಇನ್ನಷ್ಟು ತತ್ತರಿಸುವಂತೆ ಮಾಡಿದೆ. ಅನಿಲ ಸಿಲಿಂಡರ್ ಬೆಲೆಯೇರಿಕೆ ಬೆನ್ನಲ್ಲೇ ಕೆಲವು ಹೋಟೆಲ್ಗಳಲ್ಲಿ ಆಹಾರ ಸಾಮಾಗ್ರಿಗಳ ಬೆಲೆಯನ್ನು ಸದ್ದಿಲ್ಲದೆ ಏರಿಸತೊಡಗಿದೆ. ಇದೇ ಸಂದರ್ಭದಲ್ಲಿ ಮನೆಗಳಲ್ಲಿ ಬಳಸುವ ೧೪.೨ ಕೆಜಿ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಉಂಟಾಗದಿರುವುದು ಜನಸಾಮಾನ್ಯರಿಗೆ ಸಮಾಧಾನಕರ ಸಂಗತಿಯಾಗಿದೆ. ಮಾರ್ಚ್ 3ರಂದು ಗೃಹ ಬಳಕೆ ಸಿಲಿಂಡರ್ ಬೆಲೆ60 ರೂ. ಹೆಚ್ಚಿಸಲಾಗಿತ್ತು. ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕ ತೈಲ ಕಂಪೆನಿಗಳು ವಾಣಿಜ್ಯ ಬಳಕೆಯ 19 ಕೆ.ಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಂದಿನಿಂದ 195.50 ರೂ.ನಂತೆ ಹೆಚ್ಚಳಮಾಡಿವೆ.ಇದರಿಂದಾಗಿ ಕೇರಳದಲ್ಲಿ 19 ಕೆ.ಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ಈಗ 2092 ರೂ.ಗೇರಿದೆ. ಇದಕ್ಕೂ ಮೊದಲು ಮಾರ್ಚ್ ೧ರಂದು ಪ್ರತೀ ಸಿಲಿಂಡರ್ ಬೆಲೆಯಲ್ಲಿ ತಲಾ 114.5 ರೂ.ನಂತೆ ಹೆಚ್ಚಿಸಲಾಗಿತ್ತು. ಅದಾದ ಬೆನ್ನಲ್ಲೇ ಎಪ್ರಿಲ್ ತಿಂಗಳ ಮೊದಲ ದಿನದಿಂದಲೇ ಬೆಲೆಯಲ್ಲಿ ಮತ್ತೆ 195.50 ರೂ.ನಂತೆ ಹೆಚ್ಚಿಸಲಾಗಿದೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇಂಧನ ಪೂರೈಕೆಯಲ್ಲಿ ವ್ಯತ್ಯಯ ವುಂಟಾಗಿದ್ದು ಇದರಿಂದಾಗಿ ಜಾಗತಿಕ ತೈಲ ಬೆಲೆಯಲ್ಲಿ ಸುಮಾರು ಶೇ. 50ರಷ್ಟು ಹೆಚ್ಚಳವಾಗಿದೆ. ಇದು ಹೋಟೆಲ್ಗಳ ಮೇಲೆ ಅತೀ ಹೆಚ್ಚಿನ ಪರಿಣಾಮ ಬೀರತೊಡಗಿದೆ. ಎಲ್ಪಿಜಿ ಸಿಲಿಂಡರ್ಗಳ ಪೂರೈಕೆ ಸರಿಯಾಗಿ ನಡೆಯದೇ ಇರುವುದರಿಂದ ಕಾಸರಗೋಡು ಸೇರಿದಂತೆ ಕೇರಳದಲ್ಲಿ ಹಲವಾರು ಹೋಟೆಲ್ಗಳು ಮುಚ್ಚಿಕೊಂಡಿದೆ. ಕರ್ನಾಟಕ ಸಹಿತ ಇತರ ಹಲವು ರಾಜ್ಯಗಳಲ್ಲೂ ಹೋಟೆಲ್ಗಳು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ.ಇಂತಹ ಪರಿಸ್ಥಿತಿಯಲ್ಲಿ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆಯುಂಟಾಗಿರು ವುದು ಹೋಟೆಲ್ ಉದ್ಯಮವನ್ನು ಇನ್ನಷ್ಟು ತತ್ತರಿಸುವಂತೆ ಮಾಡಿದೆ. ಅನಿಲ ಸಿಲಿಂಡರ್ ಬೆಲೆಯೇರಿಕೆ ಬೆನ್ನಲ್ಲೇ ಕೆಲವು ಹೋಟೆಲ್ಗಳಲ್ಲಿ ಆಹಾರ ಸಾಮಾಗ್ರಿಗಳ ಬೆಲೆಯನ್ನು ಸದ್ದಿಲ್ಲದೆ ಏರಿಸತೊಡಗಿದೆ. ಇದೇ ಸಂದರ್ಭದಲ್ಲಿ ಮನೆಗಳಲ್ಲಿ ಬಳಸುವ ೧೪.೨ ಕೆಜಿ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಉಂಟಾಗದಿರುವುದು ಜನಸಾಮಾನ್ಯರಿಗೆ ಸಮಾಧಾನಕರ ಸಂಗತಿಯಾಗಿದೆ. ಮಾರ್ಚ್ ೭ರಂದು ಗೃಹ ಬಳಕೆ ಸಿಲಿಂಡರ್ ಬೆಲೆ ೬೦ ರೂ. ಹೆಚ್ಚಿಸಲಾಗಿತ್ತು.





