ದಾಖಲುಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 11.40 ಲಕ್ಷ ರೂ. ಪತ್ತೆ: ಕಣ್ಣೂರು ನಿವಾಸಿ ಕಸ್ಟಡಿಗೆ

ಕಾಸರಗೋಡು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಸರಗೋಡು ಪೊಲೀಸರು ಇಂದು ಮುಂಜಾನೆ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಸರಿಯಾದ ದಾಖಲುಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 11,40,000 ರೂ. ನಗದು ಪತ್ತೆಹಚ್ಚಿ ವಶಪಡಿಸಿಕೊಂ ಡಿದ್ದಾರೆ. ಇದಕ್ಕೆ ಸಂಬಂಧಿಸಿ ಕಣ್ಣೂರು ಅಳಿಕ್ಕಲ್ ಪಾದಿರಾಪರಂ ಬಿಲ್‌ಪಾರಯಿಲ್ ನಿವಾಸಿ ಅನೂಪ್ (37) ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು  ಆತನ ಹೇಳಿಕೆ ದಾಖಲಿಸಿ ಕೊಂಡಿದ್ದಾರೆ. ನಗರದ ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಬಳಿಯ ಟ್ರಾಫಿಕ್ ಜಂಕ್ಷನ್ ನಲ್ಲಿ ಕಾಸರಗೋಡು ಪೊಲೀಸರು ಇಂದು ಮುಂಜಾನೆ 2 ಗಂಟೆ ವೇಳೆವಾಹನ ತಪಾಸಣೆಯಲ್ಲಿ ತೊಡಗಿದ್ದಾಗ ಆ ದಾರಿಯಾಗಿ ಬರುತ್ತಿದ್ದ ಕಣ್ಣೂರು ಜಿಲ್ಲೆ  ನೋಂದಾಯಿತ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರಲ್ಲಿ ಈ ನಗದು ಪತ್ತೆಹಚ್ಚಿ ಅದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಆ ಕಾರಿನಲ್ಲ್ಲಿದ್ದ ಅನೂಪ್ ನ್ನು ಪೊಲೀಸರು ಕಸ್ಟಡಿಗೆ ತೆಗೆದು ವಿಚಾರಿಸಿ ಆತನ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಹೀಗೆ ವಶಪಡಿಸಿದ ಹಣವನ್ನು ಪೊಲೀಸರು ಇಂದು ನ್ಯಾಯಾ ಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಇದಕ್ಕೆ ಸಂಬಂ ಧಿಸಿದ ಸರಿಯಾದ ದಾಖಲು ಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದಲ್ಲಿ ಈ ಹಣ ಅದರ ವಾರಿಸುದಾರನಿಗೆ ಲಭಿಸಲಿದೆ ಯೆಂದೂ ಇಲ್ಲವಾದಲ್ಲಿ ಅದು ಸರಕಾರಿ ಖಜಾನೆಗೆ ಸೇರಲಿದೆ ಯೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಎನ್‌ಫೋರ್ಸ್ ಮೆಂಟ್ ವಿಭಾಗವೂ ತನಿಖೆ ನಡೆಸು

RELATED NEWS

You cannot copy contents of this page