ಗೂಡ್ಸ್ ಆಟೋ ಮಗುಚಿ ಬಿದ್ದು ಚಿಕಿತ್ಸೆಯಲ್ಲಿದ್ದ ಯುವಕ ಸಾವು

ಕಾಸರಗೋಡು: ಗೂಡ್ಸ್ ಆಟೋ ರಿಕ್ಷಾ ಮಗುಚಿ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆ ಯಲ್ಲಿದ್ದ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ. ಪರವನಡ್ಕದ ನಿರ್ಮಾಣ ಸಂಸ್ಥೆಯೊಂದರ ಸೂಪರ್‌ವೈಸರ್ ಆಗಿ ದುಡಿಯುತ್ತಿದ್ದ ಪರವನಡ್ಕ ಮಣಿಯಂಗಾನ ನಿವಾಸಿ ಎಂ. ಬದ್ರುದ್ದೀನ್ (36) ಸಾವನ್ನಪ್ಪಿದ ಯುವಕ.

ಪೆರುಂಬಳೆಯಲ್ಲಿ ನಿರ್ಮಾಣ ಕೆಲಸದ ಸ್ಥಳಕ್ಕೆ ಸಾಮಗ್ರಿಗಳೊಂದಿಗೆ ಗೂಡ್ಸ್ ಆಟೋದಲ್ಲಿ ಬದ್ರುದ್ದೀನ್ ಕಳೆದ ಮಂಗಳವಾರ ಬೆಳಿಗ್ಗೆ ಹೋಗುತ್ತಿದ್ದ ವೇಳೆ ಪೆರುಂಬಳ ರಸ್ತೆಯ ವಿಷ್ಣು ಪಾರಕುಂಡ್ ಜಂಕ್ಷನ್‌ಗೆ ತಲುಪಿದಾಗ ಗೂಡ್ಸ್ ಆಟೋ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿತ್ತು. ಇದರಿಂದ ಗಂಭೀರ ಗಾಯಗೊಂಡ ಬದ್ರುದ್ದೀನ್‌ರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿ ಯಾಗದೆ ಅವರು ನಿನ್ನೆ ಅಸುನೀಗಿ ದರು. ಹೊಸದುರ್ಗ ಅರಂಙಾಡಿಯ ದಿ| ಮೊದೀನ್ ಕುಂಞಿ- ಆಯಿಷಾ ದಂಪತಿ ಪುತ್ರನಾಗಿರುವ ಬದ್ರುದ್ದೀನ್ ಪತ್ನಿ ಫಸೀಲ, ಮಕ್ಕಳಾದ ಮೊದೀನ್, ಫಸ್, ಸಹೋದರ ಸಹೋದರಿಯರಾದ ಅಬ್ದುಲ್ ಲತೀಫ್, ಮುಹಮ್ಮದ್ ಬಶೀರ್, ಸಕೀನಾ, ಸೈನಬ, ಝೀನತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page