ಚಟ್ಟಂಚಾಲ್- ಚೆರ್ಕಳ ರಾಷ್ಟ್ರೀಯ ಹೆದ್ದಾರಿ ಇಂದಿನಿಂದ 2 ವಾರ ಮುಚ್ಚುಗಡೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುವ ನಿರ್ಮಾಣ ಕಾಮಗಾರಿಗಳಂಗವಾಗಿ ತೆಕ್ಕಿಲ್, ಬೇವಿಂಜ ಭಾಗಗಳಲ್ಲಿ ರಸ್ತೆಯಲ್ಲಿ ಹೊಂಡ ತೆಗೆಯುವುದರ ಹಿನ್ನೆಲೆಯಲ್ಲಿ ಇಂದಿನಿಂದ 2 ವಾರ ಸಂಚಾರ ನಿಷೇಧಿಸಲಾಗಿದೆ. ಕಣ್ಣೂರು ಭಾಗದಿಂದ ಆಗಮಿಸುವ ವಾಹನಗಳು ಕಾಞಂಗಾಡ್ ಸೌತ್‌ನಿಂದ ಕೆಎಸ್‌ಟಿಪಿ ರಸ್ತೆ ಮೂಲಕವೂ, ಪೆರಿಯ ಪೊಯಿನಾಚಿ ಕಡೆಯಿಂದ ಬರುವ ವಾಹನಗಳು ಚಟ್ಟಂಚಾಲ್ ಮಲ್ಸೇತುವೆಯನ್ನು ಪ್ರವೇಶಿಸದೆ ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ ಚಟ್ಟಂಚಾಲ್- ಪರವನಡ್ಕ ದೇಳಿ ರಸ್ತೆ ಮೂಲಕ ಕೆಎಸ್‌ಟಿಪಿ ರಸ್ತೆಗೆ ಪ್ರವೇಶಿಸಿ ಮುಂದುವರಿಯಬೇಕಾಗಿದೆ.

ಮಂಗಳೂರು ಭಾಗದಿಂದ ಕಣ್ಣೂರು ಭಾಗಕ್ಕೆ ತೆರಳುವ ವಾಹನಗಳು ಕಾಸರಗೋಡು ಅಡ್ಕತ್ತಬೈಲ್ ಸಮೀಪದಿಂದ ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ ಹಳೆ ಪ್ರೆಸ್ ಕ್ಲಬ್ ಜಂಕ್ಷನ್ ಮೂಲಕ ಕೆಎಸ್‌ಟಿಪಿ ರಸ್ತೆಯಾಗಿ ಕಣ್ಣೂರು ಭಾಗಕ್ಕೆ ತೆರಳಬೇಕು. ಸಾರ್ವಜನಿಕರು ಮೇಲೆ ತಿಳಿಸಿದಂತೆ ವಾಹನ ಸಂಚಾರ ನಡೆಸಿ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

RELATED NEWS

You cannot copy contents of this page