ಪುಣೆ: ಪ್ರಿಯತಮನ ಜೊತೆ ಜೀವಿಸಲೆಂದು ತಾಯಿ 6 ವರ್ಷದ ಮಗನನ್ನು ಪ್ರಿಯತಮನ ಸಹಾಂi ದೊಂದಿಗೆ ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಲೆಗೈದ ಘಟನೆ ನಡೆದಿದೆ. ಬಕೆಟ್‌ನಿಂದ ಹೊರ ತೆಗೆದು ಮಗು ಮೃತಪಟ್ಟಿದೆಯೇ ಎಂಬುದನ್ನು ಖಚಿತಪಡಿಸಲು ಮೃತದೇಹವನ್ನು ನೆಲಕ್ಕೆ ಬಡಿದಿರುವುದಾಗಿಯೂ ಹೇಳಲಾಗುತ್ತಿದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಖೇಡಿ ಎಂಬಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ಕೊಲೆಗೈದ ಮರುದಿನ ತಾಯಿ ಬಾಸಿರನ್ ಮೆಹಬೂಬ್ ಶೇಕ್ (27) ಮಗುವಿನ ಮೃತದೇಹವನ್ನು ತನ್ನ ಕುಟುಂಬ ಮನೆಗೆ ಕೊಂಡೊಯ್ದಿದ್ದಳು. ಹೃದಯಾಘಾv ದಿಂದ ಪುತ್ರ ಮೃತಪಟ್ಟಿರುವುದಾಗಿ ತಾಯಿ ಆ ವೇಳೆ ಸಂಬಂಧಿಕರಲ್ಲಿ ತಿಳಿಸಿದ್ದಳು. ಮಗುವಿನ ಅಂತ್ಯಕ್ರಿಯೆಗಳಿಗೆ ಮೃತದೇಹವನ್ನು ಸ್ನಾನ ಮಾಡಿಸುವ ವೇಳೆ ದೇಹದಲ್ಲಿ ಗಾಯಗಳು ಕಂಡು ಬಂದಿದೆ.
ಶಂಕೆ ತಾಳಿದ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಲುಪಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ ಕೊಲೆ ಕೃತ್ಯವೆಂದು ತಿಳಿದು ಬಂತು. ಆ ಬಳಿಕ ತಾಯಿಯನ್ನು ಕಸ್ಟಡಿಗೆ ತೆಗೆದಿದ್ದು ಆಕೆ ತಾನು ಮಾಡಿದ ದುಷ್ಕೃತ್ಯದ ಬಗ್ಗೆ ತಿಳಿಸಿದ್ದಾಳೆ. ಮೂವರು ಮಕ್ಕಳ ತಾಯಿಯಾದ ತಾನು ಹಾಗೂ ಪತಿ ಮೆಹಬೂಬ್ ಮಧ್ಯೆಗಿನ ಸಂಬಂಧವನ್ನು ಬೇರ್ಪಡಿಸಲಾಗಿದೆ. ಹಿರಿಯ ಎರಡು ಮಕ್ಕಳ ಸಂರಕ್ಷಣೆ ತಂದೆ ವಹಿಸಿಕೊಂಡಿದ್ದಾರೆ. ಕಿರಿಯ ಮಗುವನ್ನು ತನ್ನ ಸಂರಕ್ಷಣೆಗೆ ನೀಡಲಾಗಿದೆ. ಈ ಮಧ್ಯೆ ರಾಮ್ ವಿನಾಯಕ್ ಎಂಬಾತನೊಂದಿಗೆ ಸ್ನೇಹ ಉಂಟಾಗಿ ಅದು ಬಿಟ್ಟಿರಲಾಗದಷ್ಟು ತೀವ್ರವಾದಾಗ ಮಗು ಅದಕ್ಕೆ ತಡೆಯಾಗುತ್ತದೆ ಎಂದು ಹೆದರಿ ಕೊಲ್ಲಲು ತೀರ್ಮಾನಿಸಿರುವುದಾಗಿ ತಾಯಿ ಪೊಲೀಸರಿಗೆ ತಿಳಿಸಿದ್ದಾಳೆ. ಘಟನೆಯ ಬಳಿಕ ತಲೆಮರೆಸಿಕೊಂಡ ಪ್ರಿಯತಮನಿಗಾಗಿ ಪೊಲೀಸರು ತನಿಖೆ ತೀವ್ರ ಗೊಳಿಸಿದ್ದಾರೆ.







