ತೆಂಗಾಶಿಯಲ್ಲಿ ವಾಹನ ಅಪಘಾತ: ಆರು ಮಂದಿ ಸಾವು
ಚೆನ್ನೈ: ತಮಿಳುನಾಡಿನ ತೆಂಗಾಶಿಯಲ್ಲಿ ಇಂದು ಮುಂಜಾನೆ ಸಂಭವಿಸಿದ ವಾಹನ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಕಾರು ಹಾಗೂ ಲಾರಿ ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ. ಕಾರಿನಲ್ಲಿ ಆರು ಮಂದಿ ಯುವಕರಿದ್ದರು. ಅವರೆಲ್ಲರೂ ಅಪಘಾತದಲ್ಲಿ ಮೃತ್ಯುಗೀಡಾಗಿದ್ದಾರೆ. ಸ್ನೇಹಿತರಾದ ಆರು ಮಂದಿ ಸೇರಿ ಕಾರು ಬಾಡಿಗೆಗೆ ಪಡೆದು ಕುಟ್ಟಾಲ ಜಲಪಾತ ಕಾಣಲು ತೆರಲಿದ್ದರು. ಅಲ್ಲಿಂದ ಮರಳಿ ಬರುತ್ತಿದ್ದಾಗ ಇಂದು ಮುಂಜಾನೆ ೩ ಗಂಟೆಗೆ ಅಪಘಾತವುಂಟಾಗಿದೆ. ಸಿಮೆಂಟ್ ಹೇರಿ ಬಂದ ಲಾರಿ ಹಾಗೂ ಕಾರು ಢಿಕ್ಕಿ ಹೊಡೆದಿದೆ. ಮೃತಪಟ್ಟವರು ತೆಂಗಾಶಿ ಚಿಂತಾಮಣಿ ನಿವಾಸಿಗಳಾದ ಕಾರ್ತಿಕ್, ವೇಲ್, ಮನೋಜ್, ಸುಬ್ರಹ್ಮಣ್ಯನ್, ಮನೋಹರನ್, ಮುದಿ ರಾಜ್ ಎಂಬಿವರೆಂದು ಗುರುತಿಸಲಾಗಿದೆ.