ಕಾಸರಗೋಡು: ಕೇರಳದ ಜನರು ರಾಜಕೀಯ ಬದಲಾವಣೆ ಆಗ್ರಹಿಸುತ್ತಿದ್ದಾರೆ ಎಂದು ಈ ಬಾರಿಯ ಚುನಾವಣಾ ಫಲಿತಾಂಶ ಅದರ ಪ್ರತಿಫಲನವಾಗಲಿದೆ ಎಂದು ಆರ್‌ಎಸ್‌ಎಸ್ ಮುಖಂಡ ಸುಬ್ರಹ್ಮಣ್ಯ ಭಟ್ ಕಜಂಪಾಡಿ ನುಡಿದರು. ಕಾಸರಗೋಡು ವಿಧಾನಸಭಾ ಮಂಡಲ ಚುನಾವಣೆಯ ಅಂಗವಾಗಿ ಬಿಜೆಪಿ ಎನ್‌ಡಿಎ ಪದಾಧಿಕಾರಿಗಳಿಗೆ, ಸಂಘದ ವಿವಿಧ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಏರ್ಪಡಿಸಿದ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇಶದ ಅಭಿವೃದ್ಧಿಗೆ ಕೇರಳ ಕೂಡಾ ಅಭಿವೃದ್ಧಿಗೊಳ್ಳಬೇಕಾಗಿದೆ. ಇದಕ್ಕಾಗಿ ರಾಜಕೀಯ ಆಡಳಿತ ಬದಲಾವಣೆ ಅನಿವಾರ್ಯವಾಗಿದೆ ಎಂದು ಈ ಉದ್ದೇಶದಿಂದ ಹಗಲಿರುಳು ದುಡಿದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್ ಅಧ್ಯಕ್ಷತೆ ವಹಿಸಿದರು.
ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಸಹಕಾರ ಭಾರತಿ ರಾಜ್ಯಾಧ್ಯಕ್ಷ ಕರುಣಾಕರನ್ ನಂಬ್ಯಾರ್, ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ಸತೀಶ್ಚಂದ್ರ ಭಂಡಾರಿ, ರಾಮಪ್ಪ ಮಂಜೇಶ್ವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಮುಖಂಡರಾದ ಡಿ. ಶಂಕರ, ಅಶ್ವಿನಿ ಕೆ.ಎಂ, ಸುಜ್ಞಾನಿ ಶ್ಯಾನುಭೋಗ್, ಎಂ. ಜನನಿ, ಪುಷ್ಪಾ ಗೋಪಾಲನ್, ಪ್ರಮೀಳಾ ಮಜಲ್, ಸುಕುಮಾರ ಕುದ್ರೆಪ್ಪಾಡಿ, ವೀಣಾ ಅರುಣ್ ಶೆಟ್ಟಿ, ಎಂ. ಗೋಪಾಲಕೃಷ್ಣ ಮಾತನಾಡಿದರು.






