ಪ್ರೀತಿ ನಿರಾಕರಣೆ: 16ರ ಬಾಲಕಿಗೆ ಇರಿದು ಕೊಲೆಗೆತ್ನ

ತಿರುವನಂತಪುರ: ಪ್ರೀತಿ ನಿರಾಕರಿಸಿದ ದ್ವೇಷದಿಂದ 16ರ ಬಾಲಕಿಯನ್ನು ಇರಿದು ಗಾಯಗೊಳಿಸಿದ ಘಟನೆ ನಡೆದಿದೆ. ತಿರುವನಂತಪುರ ಕನ್ಯಾಕುಳಂಗರ ನಿವಾಸಿಯಾದ 16ರ ಬಾಲಕಿ ಆಕ್ರಮಣಕ್ಕೆ ತುತ್ತಾಗಿದ್ದಾಳೆ. ಪನವೂರ್ ನಿವಾಸಿಯಾದ ಫಹದ್ ಇರಿದಿದ್ದಾನೆ. ಕಾರಿನಲ್ಲಿ ತಲುಪಿದ ಆರೋಪಿ ಬಾಲಕಿಗೆ ಇರಿದು ಕೊಲೆಗೈಯ್ಯಲೆತ್ನಿಸಿದ್ದನು. ಕುತ್ತಿಗೆಗೆ ಗಾಯಗೊಂಡ ಬಾಲಕಿಯನ್ನು ಕೂಡಲೇ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು.

ನೆಡುವೇಲಿ ಹೈಯರ್ ಸೆಕೆಂಡರಿ ಶಾಲೆಯ ದ್ವಿತೀಯ ವರ್ಷದ ಪ್ಲಸ್ ಟು ವಿದ್ಯಾರ್ಥಿನಿಯಾಗಿದ್ದಾಳೆ ಬಾಲಕಿ. ಆರೋಪಿ ಪರಾರಿಯಾಗಿದ್ದಾನೆ. ವಟ್ಟಪ್ಪಾರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

You cannot copy contents of this page