ಬೀಡಿ ವಲಯದ ಕಾರ್ಮಿಕರನ್ನು ಸಂರಕ್ಷಿಸಬೇಕು- ಬೀಡಿ ಮಜ್ದೂರ್ ಸಂಘ್

ಕಾಸರಗೋಡು: ಬೀಡಿ ವಲಯದಲ್ಲಿ ದುಡಿಯುತ್ತಿರುವ ಬೀಡಿ ಕಾರ್ಮಿಕರನ್ನು ಸಂರಕ್ಷಿಸಬೇಕೆಂದು ಜಿಲ್ಲಾ ಬೀಡಿ ಮಜ್ದೂರ್ ಸಂಘ್‌ನ  ವಾರ್ಷಿಕ ಪ್ರತಿನಿಧಿ ಸಮ್ಮೇಳನ ಆಗ್ರಹಿಸಿದೆ. ಒಂದು ಕಾಲದಲ್ಲಿ ಕಾಸರಗೋಡು, ಕಣ್ಣೂರು ಜಿಲ್ಲೆಯಲ್ಲಿ ಲಕ್ಷಾಂತರ ಕಾರ್ಮಿಕರು ದುಡಿಯುತ್ತಿದ್ದ ವಲಯವಾಗಿತ್ತು ಇದು. ಆದರೆ ಈಗ ವಿವಿಧ ಅಸೌಖ್ಯ ತಗಲಿ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಪಿಎಫ್ ಪಿಂಚಣಿ ಎಂಬುದು ನಾಮ ಮಾತ್ರವಾಗಿದ್ದು, ಡಿಎ ಮೊದಲಾದ ಸೌಲಭ್ಯಗಳು ಲಭಿಸುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಈ ವಲಯವನ್ನು ಸಂರಕ್ಷಿಸಬೇಕೆಂದು ಸಮ್ಮೇಳನ ಆಗ್ರಹಿಸಿದೆ. ಭಾರತೀಯ ಮಜ್ದೂರ್ ಸಂಘ್ ರಾಜ್ಯ ಸಮಿತಿ ಅಧ್ಯಕ್ಷ ವಿ.ವಿ. ಬಾಲಕೃಷ್ಣನ್ ಉದ್ಘಾಟಿಸಿದರು. ಗಂಗಾಧರನ್ ಪೊವ್ವಲ್‌ಪಳ್ಳಿ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ರಾಜ್ಯ ಸಮತಿ ಸದಸ್ಯ ಟಿ. ಕೃಷ್ಣನ್, ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ಜಿಲ್ಲಾ ಉಪಾಧ್ಯಕ್ಷೆ ಗೀತಾ ಬಾಲಕೃಷ್ಣನ್, ಜೊತೆ ಕಾರ್ಯದರ್ಶಿಗಳಾದ ದಿನೇಶ್ ಬಂಬ್ರಾಣ, ಭಾಸ್ಕರನ್ ಪೊಯಿನಾಚಿ, ಗುರುದಾಸ್ ಮಧೂರು, ಮಿನಿ ಶ್ರೀನಿವಾಸನ್, ಮುಳ್ಳೇರಿಯ ವಲಯ ಕಾರ್ಯದರ್ಶಿ ಆನಂದನ್ ಮುಳ್ಳೇರಿಯ, ಕಾಸರಗೋಡು ವಲಯ ಕಾರ್ಯದರ್ಶಿ ಬಾಬುಮೋನ್ ಚೆಂಗಳ ಮಾತನಾಡಿದರು. ಬಿಎಂಎಸ್ ಜಿಲ್ಲಾ ಜೊತೆಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ ಸಮಾರೋಪ ಭಾಷಣ ಮಾಡಿದರು. ಟಿ. ಕೃಷ್ಣನ್ ಸ್ವಾಗತಿಸಿ, ಮಿನಿ ಶ್ರೀನಿವಾಸನ್ ವಂದಿಸಿದರು.

You cannot copy contents of this page