ಕಾಸರಗೋಡು: ಉದುಮ ಗ್ರೀನ್‌ವುಡ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ 11ನೇ ಜಿಲ್ಲಾ ಯೋಗ ಚಾಂಪ್ಯನ್‌ಶಿಪ್‌ನಲ್ಲಿ ಕಾಸರಗೋಡಿನ ಅಷ್ಟಾಂಗ ಯೋಗ ಕೇಂದ್ರ ಸಮಗ್ರ ಚಾಂಪ್ಯನ್ ಪಡೆದಿದೆ. ಇಲ್ಲಿನ ವಿದ್ಯಾರ್ಥಿಗಳಾದ ಅಮನ್ ಎಂ. 1೦ರಿಂದ 12ರ ಮಧ್ಯ ಪ್ರಾಯದ ಹುಡುಗರ ವಿಭಾಗದಲ್ಲಿ ದ್ವಿತೀಯ, ಹುಡುಗಿಯರ ವಿಭಾಗದಲ್ಲಿ ದಿಲ್ಮಾ ಜಿ. ದ್ವಿತೀಯ, 12ರಿಂದ 14 ರ ಮಧ್ಯೆಗಿನ ಹುಡುಗರ ವಿಭಾಗದಲ್ಲಿ ಧ್ಯಾನ್ ಜಿ. ಪ್ರಥಮ, ಧನ್ವಿತ್ ಶೆಟ್ಟಿ ದ್ವಿತೀಯ, ಹುಡುಗಿಯರ ವಿಭಾಗದಲ್ಲಿ ಅಪರ್ಣ ಪಿ. ದ್ವಿತೀಯ, 14ರಿಂದ 16ರ ಮಧ್ಯೆಗಿನ ಹುಡುಗರ ವಿಭಾಗದಲ್ಲಿ ಅನ್ವಿತ್ ಶೆಟ್ಟಿ ಪ್ರಥಮ, 16ರಿಂದ 18ರ ಮಧ್ಯೆಗಿನ ಹುಡುಗಿಯರ ವಿಭಾಗದಲ್ಲಿ ರಕ್ಷಿತಾ ಶೆಟ್ಟಿ ದ್ವಿತೀಯ ಹಾಗೂ ೨೫ರಿಂದ ೩೦ರ ಮಧ್ಯೆಗಿನ ಪುರುಷರ ವಿಭಾಗದಲ್ಲಿ ಆಕಾಶ್ ಪದ್ಮ ಪ್ರಥಮ ಸ್ಥಾನ ಗಳಿಸಿದ್ದಾರೆ.
ಹುಡುಗರ ವಿಭಾಗದ ಆರ್ಟಿಸ್ಟಿಕ್ಸ್ ಸೋಲೊ ಯೋಗ ಸ್ಪರ್ಧೆಯಲ್ಲಿ ಅನ್ವಿತ್ ಶೆಟ್ಟಿ ಪ್ರಥಮ, ಹುಡುಗಿಯರ ವಿಭಾಗದಲ್ಲಿ ಅಪರ್ಣ ಪಿ. ಪ್ರಥಮ, ರಿತಮಿಕ್ ಯೋಗ ಸ್ಪರ್ಧೆಯಲ್ಲಿ ಆಧ್ವಿ ಹಾಗೂ ದಿಲ್ಮಾ ಪ್ರಥಮ, ಆರ್ಟಿಸ್ಕಿಕ್ ಪೇರ್ ಹುಡುಗರ ವಿಭಾಗದಲ್ಲಿ ಧ್ಯಾನ್ ಜಿ, ನಂದಿತ್ ಆರ್. ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಿಗೆ ಅಷ್ಟಾಂಗ ಯೋಗ ಕೇಂದ್ರದ ಶಿಕ್ಷಕ ಆಕಾಶ್ ಪದ್ಮ ತರಬೇತಿ ನೀಡಿದ್ದಾರೆ.






