ಶ್ರೀಕೃಷ್ಣ ಚಿಕನ್ ಕುಳಿಮಂದಿ ಸೇವಿಸುವ ರೀತಿಯ ಚಿತ್ರದೊಂದಿಗೆ ವಿಷುಶುಭಾಶಯ: ಹೋಟೆಲ್ ಮಾಲಕ ಸೆರೆ

ಆಲಪ್ಪುಳ: ಭಗವಾನ್ ಶ್ರೀಕೃಷ್ಣ ‘ಚಿಕನ್ ಕುಳಿಮಂದಿ’ ಸೇವಿಸುವ ರೀತಿಯ ಚಿತ್ರದೊಂದಿಗೆ ವಿಷು ಶುಭಾಶಯ ತಿಳಿಸಿದ ಹೋಟೆಲ್ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಚೇರ್ತಲದ ಮೆಹರ್‌ಮಂದಿ ರೆಸ್ಟೋರೆಂಟ್‌ನ ಮಾಲಕನಾದ ಅರ್ಷಾದ್ ಎಂಬಾತನನ್ನು  ಬಂಧಿಸಲಾ ಗಿದೆ. ಗಲಭೆ ಸೃಷ್ಟಿಸುವ ಉದ್ದೇಶ ದೊಂದಿಗೆ  ಮನಃಪೂರ್ವಕವಾಗಿ ಈ ರೀತಿ ಮಾಡಲಾಗಿದೆ ಎಂದು ತಿಳಿಸಿ ಭಾರತೀಯ ನ್ಯಾಯ ಸಂಹಿತೆಯ ಕಾಯ್ದೆ ಪ್ರಕಾರ ಕೇಸು ದಾಖಲಿಸಿ ಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಒಂದು ವರ್ಷ ವರೆಗೆ ಶಿಕ್ಷೆ ಲಭಿಸಬಹುದಾದ ಕಾಯ್ದೆಯಂತೆ ಕೇಸು ದಾಖಲಿಸಲಾಗಿದೆ. ತಣ್ಣೀರ್ ಮುಕ್ಕಂ ನಿವಾಸಿಯಾದ ನ್ಯಾಯವಾದಿ ಎಂ.ವಿ. ಬಿಜು ಎಂಬವರು ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ.  ಶ್ರೀಕೃಷ್ಣನ ಮುಂದೆ ‘ಚಿಕನ್ ಕುಳಿಮಂದಿ’ ಇರಿಸಿ ಪೋಸ್ಟರ್ ಸಿದ್ಧಪಡಿಸಿ ಸಾಮಾಜಿಕ ಜಾಲತಾಣ ಗಳಲ್ಲಿ ಹಂಚಿಕೊಳ್ಳಲಾ ಗಿದೆ.  ಇದರ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂ ದಿತ್ತು. ಇದು ಮನಃಪೂರ್ವಕ ವಲ್ಲವೆಂದೂ ಸೋಶ್ಯಲ್‌ಮೀಡಿಯಾ ಪೋಸ್ಟ್ ಸಿದ್ಧಪಡಿಸಲು ಫ್ರೀಲಾನ್ಸರ್‌ಗೆ ವಹಿಸಿಕೊಡಲಾಗಿತ್ತೆಂದು ಹೋಟೆಲ್ ಮಾಲಕ ತಿಳಿಸಿದ್ದಾನೆನ್ನಲಾಗಿದೆ.

You cannot copy contents of this page