ಮಲಪ್ಪುರಂ: ತಮಿಳುನಾಡಿನ ಪೊಳ್ಳಾಚಿ ರಸ್ತೆಯಲ್ಲಿ ನಿನ್ನೆ ಸಂಜೆ ಸಂಭವಿಸಿದ ಭೀಕರ ವಾಹನ ಅಪಘಾತದಲ್ಲಿ ಮಲಪ್ಪುರಂ ಪಾಂಙ್‌ಪಳ್ಳಿಪರಂಬ್ ಸರಕಾರಿ ಎಲ್‌ಪಿ ಶಾಲೆಯ ಅಧ್ಯಾಪಿಕೆಂiiರ ಸಹಿತ ೯ ಮಂದಿ ಮೃತಪಟ್ಟ ದಾರುಣ ಘಟನೆ ಇಡೀ ನಾಡನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಅಪಘಾತದಲ್ಲಿ ೪ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವೆಂದು ಹೇಳಲಾಗುತ್ತಿದೆ.
ಮಲಪ್ಪುರಂ ಪಾಂಙ್ ಪಳ್ಳಿಪರಂಬ್ ಸರಕಾರಿ ಎಲ್‌ಪಿ ಶಾಲೆಯ ಮುಖ್ಯೋಪಾಧ್ಯಾ ಯಿನಿ ಅಜಿತ (54), ಅಧ್ಯಾಪಕ, ಅಧ್ಯಾಪಿ ಕೆಯರಾದ ರಮ್ಲ (52), ಸುಹರಾ (43), ಆಶಾ (41), ಅಬ್ದುಲ್ ಮಜೀದ್ (43), ಪತ್ನಿ ರುಖಿಯ (39), ಅಡುಗೆ ಕಾರ್ಮಿಕೆ ಸಾಜಿತ (45), ಸುಹರಾರ ಪುತ್ರ 8ನೇ ತರಗತಿ ವಿದ್ಯಾರ್ಥಿ ಹಿಶಾಂ(12), ಪಾಂಙ್ ಜಿಯುಪಿಎಸ್‌ನ ಅಧ್ಯಾಪಿಕೆ ಶಕೀನ (37) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಅಪಘಾತಕ್ಕೀಡಾದ ವ್ಯಾನ್ ಚಾಲಕ ಮುಹಮ್ಮದ್ ಫಾಹಿಸ್(22) ಸಹಿತ ಮೂರು ಮಂದಿ ಗಂಭೀರ ಗಾಯಗೊಂಡಿದ್ದಾರೆ.ಇವರನ್ನು ಕೊಯಂಬತ್ತೂರಿನ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ೧೧ರ ಹರೆಯದ ಮನ್ಸೀನ್ ಎಂಬಾತನನ್ನು ಪೊಳ್ಳಾಚಿಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ೫.೩೦ರ ವೇಳೆ ಅಪಘಾತ ಸಂಭವಿಸಿದೆ. ಶಾಲೆಗೆ ರಜೆಯಾದ ಹಿನ್ನೆಲೆಯಲ್ಲಿ ಇವರೆಲ್ಲಾ ವ್ಯಾನ್‌ನಲ್ಲಿ ಪ್ರವಾಸ ತೆರಳಿದ್ದರು. ಆದಿರಪಳ್ಳಿ ಮೂಲಕ ವಾಲ್‌ಪಾರ ಎಂಬಲ್ಲಿಗೆ ತಲುಪಿ ದೃಶ್ಯಗಳನ್ನು ವೀಕ್ಷಿಸಿ ಪೊಳ್ಳಾಚಿಗೆ ತೆರಳುತ್ತಿದ್ದಾಗ ವ್ಯಾನ್ 300 ಅಡಿ ಆಳದ ಕಂದಕಕ್ಕೆ ಉರುಳಿ ಈ ದುರ್ಘಟನೆ ಸಂಭವಿಸಿದೆ.
ಮೃತಪಟ್ಟ 9 ಮಂದಿಯ ಮೃತದೇಹಗಳನ್ನು ಮಲಪ್ಪುರಂಗೆ ತಲುಪಿಸಲಾಗಿದೆ. ಮೃತದೇಹಗಳನ್ನು ಪಾಂಙ್ ಅಂಬಲಪರಂಬ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಲಾಗಿದೆ. ಮೃತರಿಗೆ ಅಂತಿಮ ನಮನ ಸಲ್ಲಿಸಲು ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಸಹಿತ ಸಾವಿರಾರು ಮಂದಿ ತಲುಪಿದ್ದಾರೆ.







