ಯುವಕನಿಗೆ ಹಲ್ಲೆಗೈದು ಕೊಲೆ ಬೆದರಿಕೆ: ನಾಲ್ವರ ಬಂಧನ

ಉಪ್ಪಳ: ವರ್ಕಾಡಿ ಕಳಿಯೂರು ಪಡ್ಪಿನಕೆರೆಯ ರಾಕೇಶ್ (37) ಎಂಬವರಿಗೆ ಹಲ್ಲೆಗೈದು ಕೊಲೆಬೆದರಿಕೆ ಯೊಡ್ಡಿದ ಪ್ರಕರಣದಲ್ಲಿ ಆರೋಪಿಗ ಳಾದ ನಾಲ್ಕು ಮಂದಿಯನ್ನು ಮಂಜೇ ಶ್ವರ ಪೊಲೀಸರು ಬಂಧಿಸಿದ್ದಾರೆ. 

ಕಳಿಯೂರು ನಿವಾಸಿಗಳಾದ ಅಶ್ವಿನ್ ಕುಮಾರ್ ಕೆ (26),  ಅಭಿಷೇಕ್ (23), ಮನೋಜ್ ಕುಮಾರ್ ಕೆ (27), ಅನಿಲ್ ಕುಮಾರ್ ಕೆ (29) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಇವರನ್ನು ಪೊಲೀಸರು ನ್ಯಾಯಾ ಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ಇವರಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಈ ತಿಂಗಳ 11ರಂದು ರಾತ್ರಿ 9 ಗಂಟೆಗೆ  ವರ್ಕಾಡಿ ಬೇಕರಿ ಜಂಕ್ಷನ್ ಪಿ.ಸಿ ರೋಡ್‌ನಲ್ಲಿ ಸ್ಕೂಟರ್ ಹಾಗೂ ಆಟೋ ರಿಕ್ಷಾದಲ್ಲಿ ತಲುಪಿದ ಆರೋಪಿಗಳು ರಾಕೇಶ್‌ರಿಗೆ ಮಾರಕಾಯುಧ ಗಳಿಂದ ಹಲ್ಲೆಗೈದು ಗಾಯಗೊಳಿಸಿ ಕೊಲೆಬೆದರಿಕೆಯೊಡ್ಡಿ ರುವುದಾಗಿ ದೂರಲಾಗಿದೆ. 

RELATED NEWS

You cannot copy contents of this page