ಕೊಂಡೆವೂರು ಆಶ್ರಮಕ್ಕೆ ಬಂದ ಯುವತಿ ನಾಪತ್ತೆ

ಉಪ್ಪಳ: ಕೊಂಡೆವೂರು ಆಶ್ರಮಕ್ಕೆ ಬಂದಿದ್ದ ಕರ್ನಾಟಕ ನಿವಾಸಿಯಾದ ಯುವತಿ ದಿಢೀರ್ ನಾಪತ್ತೆಯಾದ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಜಕ್ಕನಹಳ್ಳಿ ನಿವಾಸಿ  ಅಕ್ಷಿತಾ (19) ನಾಪತ್ತೆಯಾಗಿ ದ್ದಾಳೆಂದು ದೂರಲಾಗಿದೆ.   ಅಕ್ಷಿತಾ ತಾಯಿ ಯಶೋಧ, ಸಹೋದರಿ ಭೂಮಿಕ ಹಾಗೂ ಓರ್ವ ಸಹೋ ದರನೊಂದಿಗೆ  ನಿನ್ನೆ ಬೆಳಿಗ್ಗೆ 9.30ರ ವೇಳೆ ಕೊಂಡೆವೂರು ಆಶ್ರಮಕ್ಕೆ ತಲುಪಿದ್ದರು.  ಬಳಿಕ 10.30ರ ವೇಳೆ ಅಕ್ಷಿತಾ ಅಲ್ಲಿಂದ ನಾಪತ್ತೆಯಾಗಿ ರುವುದಾಗಿ ಹೇಳಲಾಗುತ್ತಿದೆ.  ಇದರಿಂದ ಆ ಪರಿಸರದಲ್ಲಿ ಹುಡುಕಿದರೂ ಅಕ್ಷಿತಾ ಪತ್ತೆಯಾಗದ ಹಿನ್ನೆಲೆಯಲ್ಲಿ ಸಹೋದರಿ ಭೂಮಿಕ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.  ಅಕ್ಷಿತಾ ತಾಯಿ ಹಾಗೂ ಸಹೋದರ-ಸಹೋದರಿಯೊಂದಿಗೆ ತಿರುವನಂತಪುರದ ದೇವಸ್ಥಾನ ಸಂದರ್ಶಿಸಿ ಮರಳುತ್ತಿರುವ ದಾರಿ ಮಧ್ಯೆ ನಿನ್ನೆ ಬೆಳಿಗ್ಗೆ ಕೊಂಡೆವೂರಿಗೆ ಬಂದಿದ್ದರೆಂದು ಹೇಳಲಾಗುತ್ತಿದೆ.

RELATED NEWS

You cannot copy contents of this page